ವಿಶಿಷ್ಟ ಬಗೆಯ ಕಲಾ ಪ್ರಕಾರ, ಹಲವು ಬಗೆಯ ಕಲಾಕೃತಿಗಳು
ಹಿರಿಯ ಕಲಾವಿದರ ಸಾಧನೆಯ ಹಾದಿಯಲ್ಲಿ ಹೊಸ ತಲೆಮಾರಿನ ಕಲಾವಿದರ ಕೊಡುಗೆಗಳ ನೋಟ
ಇಂತಹ ಕಲಾವಿದರಲ್ಲಿ ಹಿನಕಲ್ ನಿವಾಸಿ ಎಲ್. ಬಸವರಾಜು ಒಬ್ಬರು
ಮೈಸೂರಿನ ಪ್ರತಿಷ್ಠಿತ ಚಾಮರಾಜೇಂದ್ರ ದೃಶ್ಯಕಲಾ ಅಕಾಡೆಮಿಯಲ್ಲಿ ಮಾಸ್ಟರ್ ಆಫ್ ಫೈನ್ ಆರ್ಟ್ಸ್(ಎಂಎಫ್ಎ) ಪದವಿ ಪಡೆದಿರುವ ಬಸವರಾಜು 20 ವರ್ಷದಿಂದ ವಿವಿಧ ಬಗೆಯ ಕಲಾಪ್ರಕಾರಗಳಲ್ಲಿ ಹೆಸರು ಮಾಡುತ್ತಾ ಬಂದಿದ್ದಾರೆ
Gadag News: ಉಲ್ಟಾ ಆಗಿ ತೆಂಗಿನಮರ ಏರುವ ಯುವಕ, ಸತತ ಪ್ರಯತ್ನದಿಂದ ಈ ಸಾಹಸ!
ಹೌದು, ಶಿಲೆ ಕೆತ್ತನೆ, ಮರಕೆತ್ತನೆ, ಉಬ್ಬುಕಲೆ, ಫೈಬರ್ ಕಲೆ, ಮಣ್ಣಿನ ಕಲಾಕೃತಿ, ಗೋಡೆ ಮೇಲಿನ ಕೆತ್ತನೆ, ಸಿಮೆಂಟ್ ಕಲಾಕೃತಿಗಳ ನಿರ್ಮಾಣ, ಮೂರಲ್ ಪೇಂಟಿಂಗ್ ಹೀಗೆ ಹತ್ತು ಹಲವು ವಿಧಗಳ ಕಲೆಯಲ್ಲಿ ಬಸವರಾಜು ಅವರು ಎತ್ತಿದ ಕೈ
ಕೋವಿಡ್ ಸಮಯದ ಕಲಾಕೃತಿಯೊಂದಕ್ಕೆ ಇವರಿಗೆ ಶಿಲ್ಪಕಲಾ ಅಕಾಡೆಮಿ ಪ್ರಶಸ್ತಿಯೂ ಲಭಿಸಿದೆ
ಕೆತ್ತನೆಯಲ್ಲಿ ಲಯ, ನುಣುಪು, ನಯ, ನಾಜೂಕು, ಕೆತ್ತನೆಗೆ ಅಗತ್ಯವಾದ ಗುಣ, ತಾಳ್ಮೆ ಹೊಂದಿರುವ ಬಸವರಾಜು, ಕಲೆಯಲ್ಲಿ ತಮ್ಮದೇ ಆದ ಛಾಪು ಮೂಡಿಸುತ್ತಾ ಬಂದಿದ್ದಾರೆ
ತಾಯಿ, ಮಗು, ಡಾ. ಬಿಆರ್ ಅಂಬೇಡ್ಕರ್, ಬುದ್ಧ, ಶಿವ, ಪೆರಿಯರ್, ಅಲೆಮಾರಿ ಜನರ ಹೀಗೆ ಹಲವು ಬಗೆಯ ಕಲಾಕೃತಿಗಳು ಇವರ ಕಲಾಕುಂಚದಲ್ಲಿ ಅರಳಿದೆ
ಇವರು ತಯಾರಿಸುವ ಕಲಾಕೃತಿಗಳು 50 ಸಾವಿರದಿಂದ 1 ಲಕ್ಷ ರೂಪಾಯಿವರೆಗೂ ಬೆಲೆ ಬಾಳುತ್ತವೆ. ಒಟ್ಟಿನಲ್ಲಿ ಬಸವರಾಜು ಅವರ ಕಲಾ ಚಾತುರ್ಯಕ್ಕೆ ನಿಜಕ್ಕೂ ಗ್ರೇಟ್ ಎನ್ನಲೇಬೇಕು
Davanagere Jatra: ದಾವಣಗೆರೆ ಜಾತ್ರೆ ಆರಂಭ, ಈ ಸೇವೆ ಮಾಡುವ ಭಕ್ತರಿಗೆ ಶವರ್ ವ್ಯವಸ್ಥೆ