ಟೂತ್​ಪೇಸ್ಟ್ ನಮ್ಮ ಹಲ್ಲುಗಳನ್ನು ಮಾತ್ರ ಹೊಳಪಾಗಿಸುವುದಷ್ಟೇ ಅಲ್ಲ. ಅನೇಕ ವಸ್ತುಗಳನ್ನು ಸ್ವಚ್ಛಗೊಳಿಸಲು ಟೂತ್​ಪೇಸ್ಟ್ ನಮಗೆ ಸಹಾಯಕವಾಗಿದೆ

ಆದರೆ ಟೂತ್​ಪೇಸ್ಟ್ ಯಾವ ವಸ್ತುಗಳನ್ನು ಸ್ವಚ್ಛಗೊಳಿಸಲು, ಎಷ್ಟು ಬಳಸಬೇಕು ಎಂದು ನಾವಿಂದು ತಿಳಿಯೋಣ ಬನ್ನಿ

ಕಾಫಿ ಕಲೆ: ಕೆಲವೊಮ್ಮೆ ಕಾಫಿ ಕಪ್ ಆಕಸ್ಮಿಕವಾಗಿ ಕೈ ಜಾರಿ ನೆಲದ ಮೇಲೆ ಬೀಳುತ್ತದೆ. ಇದನ್ನು ಸುಲಭವಾಗಿ ನಾವು ಸ್ವಚ್ಛಗೊಳಿಸಬಹುದು

ಆದರೆ ಗೋಡೆಯ ಮೇಲೆ ಆ ಕಲೆಗಳಾದರೆ ಅದನ್ನು ತೆಗೆಯುವುದು ತುಂಬಾ ಕಷ್ಟ

ಮುರಿದ ಸಂಬಂಧಗಳಿಂದ ನೀವು ಕಲಿಯಬಹುದಾದ ಅಮೂಲ್ಯ ಪಾಠಗಳಿವು!

ಈ ಕಲೆಗಳನ್ನು ತೆಗೆದುಹಾಕಲು ಟೂತ್ಪೇಸ್ಟ್ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ

ಗೋಡೆಯ ಮೇಲಿನ ಕಾಫಿ-ಟೀ ಕಲೆಗಳನ್ನು ಹೋಗಲಾಡಿಸಲು ಕಲೆಗಳ ಮೇಲೆ ಟೂತ್ ಪೇಸ್ಟ್ ಹಚ್ಚಿ ಬ್ರಶ್ನಿಂದ ಉಜ್ಜಿ, ಕೆಲವು ನಿಮಿಷಗಳ ಕಾಲ ಹಾಗೆಯೇ ಬಿಡಿ

ನಂತರ ಒದ್ದೆಯಾದ ಬಟ್ಟೆಯಿಂದ ಒರೆಸಿ. ಹೀಗೆ ಮಾಡುವುದರಿಂದ ಕಲೆಗಳು ಮಾಯವಾಗುತ್ತವೆ

ಸಿಲ್ವರ್: ಸಿಲ್ವರ್ ವಸ್ತುಗಳನ್ನು ಸ್ವಚ್ಛಗೊಳಿಸಲು ತುಂಬಾ ಕಷ್ಟವಾಗುತ್ತದೆ. ಟೂತ್ಪೇಸ್ಟ್ನಿಂದ ಬೆಳ್ಳಿಯ ಸಾಮಾನುಗಳನ್ನು ಪಾಲಿಶ್ ಮಾಡಬಹುದು

ಈ ಆಹಾರಗಳನ್ನು ತಿನ್ನುವಾಗ ಅಪ್ಪಿತಪ್ಪಿಯೂ ನೀರು ಕುಡಿಯಬೇಡಿ!

ಟೂತ್ಪೇಸ್ಟ್ ಅನ್ನು ಬೆಳ್ಳಿಯ ಪಾತ್ರೆಗಳಿಗೆ ಹಚ್ಚಿ, ಬ್ರಶ್ನಿಂದ ಉಜ್ಜಿ, ನಂತರ ನೀರಿನಿಂದ ತೊಳೆಯಿರಿ. ಹೀಗೆ ಮಾಡುವುದರಿಂದ ಕಪ್ಪಾಗಿರುವ ನಿಮ್ಮ ಬೆಳ್ಳಿಯ ವಸ್ತುಗಳು ಚೆನ್ನಾಗಿ ಹೊಳೆಯುತ್ತವೆ

ಬಿಳಿ ಬೂಟು: ಬಿಳಿ ಬೂಟುಗಳು ಹೆಚ್ಚಾಗಿ ಧರಿಸಿದಷ್ಟು ಬೇಗನೆ ಸವೆಯುತ್ತವೆ. ಇದನ್ನು ಮೊದಲಿನ ಸ್ಥಿತಿಗೆ ತರುವುದು ತುಸು ಕಷ್ಟವೆಂದೇ ಹೇಳಬಹುದು

 ಬಿಳುಪಾಗಿರುವ ನಿಮ್ಮ ಬೂಟುಗಳು ಮತ್ತೆ ಹೊಸದರಂತೆ ಹೊಳೆಯಬೇಕೆಂದು ನೀವು ಬಯಸಿದರೆ, ಟೂತ್ಪೇಸ್ಟ್ ಬಳಸಿ

ಒಂದು ಚಮಚ ಬಿಳಿ ಟೂತ್ಪೇಸ್ಟ್ ಮತ್ತು ಅಡಿಗೆ ಸೋಡಾವನ್ನು ತೆಗೆದುಕೊಂಡು ಅದನ್ನು ಸ್ವಲ್ಪ ನೀರಿನಲ್ಲಿ ಬೆರೆಸಿ ಕಲೆ ಇರುವ ಜಾಗಕ್ಕೆ ಹಚ್ಚಿ. ಇದರ ಮೇಲೆ ಒದ್ದೆ ಮಾಡಿದ ಬ್ರಶ್ ನಿಂದ ಉಜ್ಜಿ, ಒದ್ದೆ ಬಟ್ಟೆಯಿಂದ ಒರೆಸಿದರೆ ಹೊಸದರಂತೆ ಹೊಳೆಯುತ್ತದೆ

ಕುಳ್ಳಗಿರುವ ಹುಡುಗಿಯರೇ ಹುಡುಗರಿಗೆ ಯಾಕೆ ಜಾಸ್ತಿ ಇಷ್ಟ?