ಈಗಂತೂ ಎಲ್ಲಾ ಕಡೆ ಬೇಸಿಗೆಯ ಬಿಸಿಲಿನ ಬೇಗೆ

ಆದರೆ, ಮೈಸೂರಿನ ಇಲ್ಲೊಂದು ಮನೆಯಲ್ಲಿ ಸುಡು ಬೇಸಿಗೆಯಲ್ಲೂ ಕೂಡ ಎಸಿ ಫ್ಯಾನ್ ಬಳಸದೆ ಕೂಲ್ ಆಗಿರುವಂತಹ ವಿಶೇಷ ಮನೆ ಇದೆ

ಈ ಮನೆ ಈಗ ಮೈಸೂರಿನ ಎಲ್ಲರ ಗಮನವನ್ನು ಸೆಳೆಯುತ್ತಿದೆ

ಹೌದು, ಇಲ್ಲಿನ ಮೈಸೂರು ನಗರದ ಗೋಕುಲಂನ ಮೂರನೇ ಹಂತದಲ್ಲಿ ಇರುವ ಹಸಿರು ಮನೆ ಪಕ್ಷಿಗಳಿಗೆ ಆಶ್ರಯ ತಾಣವೂ ಆಗಿದೆ

ಮೂಲತಃ ಕೊಡಗು ಜಿಲ್ಲೆ ಸೋಮವಾರಪೇಟೆಯವರಾದ ಬೆಂಜಮಿನ್ ವಾಸ್ ಅವರಿಗೆ ಸೇರಿದ ಮನೆ ಇದಾಗಿದೆ

ಸೇಂಟ್ ಫಿಲೋಮಿನ ಚರ್ಚ್ ನಲ್ಲಿ ಇವರು ಫಾದರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದರು

ಕಳೆದ 20 ವರ್ಷಗಳಿಂದ ಮೈಸೂರಿನಲ್ಲಿ ಕುಟುಂಬದೊಂದಿಗೆ ನೆಲೆಸಿದ್ದಾರೆ

ಬಾಲ್ಯದಿಂದಲೂ ಪರಿಸರ ಪ್ರೇಮಿ ಆಗಿರುವ ಕಾರಣದಿಂದ ತಮ್ಮ ಮನೆಗೆ ಮುಂದೆ ಸುಮಾರು 10000 ಬಳ್ಳಿಗಳನ್ನು ಬೆಳೆದಿದ್ದಾರೆ

ಇವರ ಮನೆ ಒಳಗೆ ತೆರಳಿದರೆ ಯಾವುದೋ ಕಾಡಿನೊಳಗೆ ಹೋದಂತಹ ಅನುಭವ ಆಗುತ್ತೆ

ಮನೆಯ ಯಾವ ಮೂಲೆಗಳಿಗೂ ತೆರಳಿದರೂ ಅಲ್ಲಿ ನಿಮಗೆ ಕಾಣಸಿಗುವುದು ಹಸಿರು ಗಿಡಗಳ ಸಮೂಹವೇ

ಸುಮಾರು 2 ಸಾವಿರಕ್ಕೂ ಹೆಚ್ಚು ಅನೇಕ ಜಾತಿಯ 10,000ಕ್ಕೂ ಅಧಿಕ ಸಸ್ಯಗಳನ್ನು ಇವರು ಬೆಳೆದಿದ್ದಾರೆ

ಇದರ ಜೊತೆಗೆ ವಿಶೇಷವಾಗಿ ದೇಶ ವಿದೇಶಗಳ ಗಿಡಮೂಲಿಕೆ ಬಳ್ಳಿಗಳು, ಔಷಧಿ ಸಸ್ಯಗಳನ್ನು ತಮ್ಮ ಮನೆಯ ಸುತ್ತ ಬೆಳೆದಿದ್ದಾರೆ

Karnataka Rains: ದಾವಣಗೆರೆ, ಕೊಪ್ಪಳದಲ್ಲಿ ಗಾಳಿ-ಗುಡುಗು ಸಹಿತ ಭರ್ಜರಿ ಮಳೆ, ಇನ್ನೆಷ್ಟು ದಿನ ಇರುತ್ತೆ ವರುಣ ಅಬ್ಬರ?