ಮಂಗಳೂರು ಸ್ಪೇಷಲ್ ತವಾ ಫ್ರೈ ಮಾಡುವುದು ಹೀಗೆ!
ಮೀನು ಅಂದ್ರೆ ನೆನಪಾಗೋದು ಮಂಗಳೂರು
ಯಾಕಂದ್ರೆ ಮಂಗಳೂರಿನಲ್ಲಿ ಫ್ರೇಶ್ ಮೀನುಗಳು ಸಿಗ್ತಾವೆ
ಹಾಗಾದ್ರೆ ಬನ್ನಿ ಮಂಗಳೂರು ಸ್ಪೇಷಲ್ ತವಾ ಫ್ರೈ ಮಾಡೋಣ
Egg Cup cake Masala: ಈ ರೆಸಿಪಿ ತುಂಬಾನೇ ಸರಳ, ಟೇಸ್ಟ್ ಮಾತ್ರ ಸೂಪರ್!
ಇದನ್ನೂ ಓದಿ
ಬೇಕಾಗುವ ಸಾಮಾಗ್ರಿಗಳು: ಮೀನು, ಮೀನು ಫ್ರೈ ಪೌಡರ್, ಉಪ್ಪು, ಕರಿ ಬೇವಿನ ಎಲೆ, ಎಣ್ಣೆ, ನಿಂಬೆ, ಅರಶಿಣ ಹುಡಿ, ಶುಂಠಿ ಬೆಳ್ಳುಳ್ಳಿ ಪೇಸ್ಟ್, ಮತ್ತು ತವಾ
ಮೊದಲಿಗೆ ನೀವು ಮೀನನ್ನು ಚೆನ್ನಾಗಿ ತೊಳೆದು ಬೇಕಾದ ರೀತಿ ಕಟ್ ಮಾಡಿಕೊಳ್ಳಿ
ನಂತರ ಪಾತ್ರೆಗೆ ಮೀನುಗಳನ್ನು ಹಾಕಿಕೊಳ್ಳಿ, ಹಾಗೆ ಅರಶಿಣ ಪುಡಿ, ಉಪ್ಪು ಮತ್ತು ಶುಂಠಿ ಬೆಳ್ಳುಳ್ಳಿ ಪೇಸ್ಟ್, ಫ್ರೈ ಪೌಡರ್ ಹಾಕಿಕೊಳ್ಳಿ
ಚೆನ್ನಾಗಿ ಕೈಯಲ್ಲಿ ಮಿಶ್ರಣ ಮಾಡಿಕೊಳ್ಳಿ, ಅರ್ಧ ಗಂಟೆ ಹಾಗೆ ಬಿಡಿ
Breakfast Recipe: ಮಾಮೂಲಿ ಬೇಡ ಮಸಾಲ ಗೋಲಿ ಇಡ್ಲಿ ಮಾಡಿಕೊಡಿ; ಮಕ್ಕಳು ಗುಳುಂ-ಗಳುಂ ಅಂತ ತಿಂದು ಮುಗಿಸ್ತಾರೆ!
ಇದನ್ನೂ ಓದಿ
ನೀವು ಈಗ ತವಾವನ್ನು ರೇಡಿ ಮಾಡಿಕೊಳ್ಳಿ, ಹಾಗೆ ತವಾಗೆ ಎಣ್ಣೆಹಾಕಿಕೊಳ್ಳಿ
ಪಾತ್ರೆಯಿಂದ ಮೀನನ್ನು ತಾವಗೆ ಹಾಕಿಕೊಳ್ಳಿ ಮತ್ತು ಕರಿ ಬೇವಿನ ಎಲೆಯನ್ನು ಮೀನಿನ ಮೇಲೆ ಹಾಕಿಕೊಳ್ಳಿ
5 ರಿಂದ 10 ನಿಮಿಷದ ವರೆಗೆ ಚೆನ್ನಾಗಿ ಫ್ರೈ ಆಗಲು ಬಿಡಿ
ಈಗ ನಿಮ್ಮ ಸ್ಪೇಷಲ್ ತವಾ ಫ್ರೈ ರೆಡಿ