ಮೊದಲು ಮಧ್ಯಮ ಗಾತ್ರದ ಹಲಸಿನಕಾಯಿಯನ್ನು ತೆಗೆದುಕೊಂಡು ಬಿಡಿಸಿಕೊಳ್ಳಬೇಕು

 ನಂತರ ನೀರು ಉಪ್ಪು ಹಾಕಿ ಹಲಸಿನ ತೊಳೆಗಳನ್ನು ಬೇಯಿಸಿಕೊಳ್ಳಬೇಕು

ಒಂದು ತಾಸು ಹಲಸಿನಕಾಯಿ ಬೇಯಿಸಿದ ನಂತರ ರವೆರವೆಯಾಗಿ ಬರುವಂತೆ ಹಲಸು ಬೇಯುತ್ತದೆ

ಒಂದು ತಾಸು ಬೇಯಿಸಿದ ನಂತರ ತಣಿಯಲು ಬಿಡಬೇಕು. ಹಾಗೆ ತಣಿಯಲು ಬಿಟ್ಟು ನಂತರ ಮಿಕ್ಸಿಗೆ ಹಣ್ಣು ಹಾಕಿ ಪೇಸ್ಟ್ ರೀತಿ ರುಬ್ಬಿಕೊಳ್ಳಬೇಕು

Koppal: ಬರದ ಮಧ್ಯೆಯೂ ಕೊಪ್ಪಳದ ಈ ಭಾಗದ ರೈತರಿಗೆ ಬಂಪರ್!

ನಿಮಗೆ ಬೇಕಾದರೆ ಮಸಾಲೆ ಪದಾರ್ಥಗಳನ್ನು ಸೇರಿಸಿಕೊಳ್ಳಬಹುದು,

ಬರೀ ಹಪ್ಪಳ ಬೇಕಿದ್ದರೆ ಹಲಸಿನ ತೊಳೆಗಳನ್ನು ನುಣ್ಣಗೆ ರುಬ್ಬಿಕೊಂಡರೆ ಸಾಕು

ನಂತರ ಹಪ್ಪಳದ ಅಚ್ಚಿಂದಲೋ ಅಥವಾ ಕೈಯಿಂದಲೋ ಹಲಸಿನ ಆ ಹಿಟ್ಟನ್ನು ಬಾಳೆ ಎಲೆ ಮೇಲೆ ಹರವಿ ನಾಲ್ಕು ಬಿಸಿಲುಗಳಲ್ಲಿ ಒಣಗಿಸಿದರೆ ಗರಿಗರಿಯಾದ ಹಪ್ಪಳಗಳು ಸವಿಯಲು ಸಿದ್ಧ

ಈ ಹಪ್ಪಳಗಳನ್ನು ತಯಾರಿಸಿದವರು ಸಿದ್ದಾಪುರದ ಕಂಚಿಕೈ ನಿವಾಸಿ ರಮಾ ಹೆಗಡೆಯವರು,

 ರಮಾ ಹೆಗಡೆ ಪರಿಣಿತ ಗೃಹೋದ್ಯಮಿಯಾಗಿದ್ದು ಹಲಸಿನ ಹಪ್ಪಳ, ಮಜ್ಜಿಗೆ ಮೆಣಸು, ಚಕ್ಕುಲಿ, 

ಅರಿಶಿನ, ಬೆಣ್ಣೆ, ತುಪ್ಪ, ಚಿಪ್ಸ್ ಗಳು, ಅತ್ರಾಸ ಸೇರಿದಂತೆ ಎಲ್ಲಾ ರೀತಿಯ ವಸ್ತುಗಳನ್ನು ಮನೆಯಲ್ಲಿಯೇ ತಯಾರಿಸುತ್ತಾರೆ

Koppala Fair: ಕೊಪ್ಪಳದಲ್ಲಿ ಬುತ್ತಿ ಜಾತ್ರೆ, ಸಾಮೂಹಿಕ ಸಹಭೋಜನ!