ಕಿಂಗ್ ಕೊಹ್ಲಿ ಎಂದರೆ ಅಭಿಮಾನಿಗಳಿಗೆ ಹುಚ್ಚು ಪ್ರೀತಿ. ಭಾರತದ ಕ್ರಿಕೆಟ್ ಇತಿಹಾಸದಲ್ಲಿ ಅಜರಾಮರವಾಗಿ ಉಳಿಯುವ ಹೆಸರು ಇವರದ್ದು

ಸ್ವಲ್ಪ ಕಾಲ ಫಾರ್ಮ್ ಕಳೆದುಕೊಂಡಿದ್ದ ಕೊಹ್ಲಿ ಮತ್ತೆ ಮರಳಿದ್ದು, ಜ್ಯೋತಿಷ್ಯದ ಪ್ರಕಾರ ಅವರ ಮುಂದಿನ ಭವಿಷ್ಯ ಹೇಗಿರಲಿದೆ ಎಂಬುದು ಇಲ್ಲಿದೆ

ವಿರಾಟ್ ಕೊಹ್ಲಿ ಭಾರತ ಕ್ರಿಕೆಟ್ ತಂಡವನ್ನ ಮುನ್ನಡೆಸುವಲ್ಲಿ ಮಹತ್ವದ ಪಾತ್ರವಹಿಸಿರುವ ಪ್ರಮುಖ ವ್ಯಕ್ತಿ ಎನ್ನಬಹುದು

ವಿವಿಧ ಪಂದ್ಯಗಳಲ್ಲಿ ತಮ್ಮ ಅಮೋಘ ಪ್ರದರ್ಶನದ ಮೂಲಕ ಸಾಲು ಸಾಲು ದಾಖಲೆಗಳನ್ನ ಕೊಹ್ಲಿ ಸರಿಗಟ್ಟಿದ್ದಾರೆ

ಕಳೆದ ಕೆಲ ಸಮಯಗಳಿಂದ ವಿರಾಟ್​ ಕೊಹ್ಲಿ ಫಾರ್ಮ್​ನಲ್ಲಿ ಇರಲಿಲ್ಲ

ಆದರೆ ಮತ್ತೆ ಫಾರ್ಮ್ ಪಡೆದಿರುವ ಕೊಹ್ಲಿ ಶತಕಗಳನ್ನ ಬಾರಿಸುತ್ತಿದ್ದಾರೆ. ಇನ್ನು ಕೆಲವೇ ದಿನಗಳಲ್ಲಿ ವಿಶ್ವಕಪ್ ನಡೆಯಲಿದ್ದು, ಇದರಲ್ಲಿ ಸಹ ಕೊಹ್ಲಿ ಮಹತ್ವದ ಪಾತ್ರವಹಿಸಲಿದ್ದಾರೆ

ಕೊಹ್ಲಿ ಜಾತಕದ ಪ್ರಕಾರ ಅವರ ಮುಂದಿನ ಭವಿಷ್ಯ ಹೇಗಿರಲಿದೆ, ಭಾರತ ತಂಡ ವಿಶ್ವಕಪ್ ಮುಡಿಗೇರಿಸಿಕೊಳ್ಳುತ್ತಾ? ಈ ಕುತೂಹಲ ಎಲ್ಲರಲ್ಲಿದ್ದು, ಕೆಲ ಮಾಹಿತಿ ಇಲ್ಲಿದೆ

ವಿರಾಟ್​ ಜಾತಕದ ಪ್ರಕಾರ ಅವರದ್ದು ಮೀನ ರಾಶಿಯಾಗಿದ್ದು, , ಈ ವರ್ಷ ಗ್ರಹಗಳ ಕಾರಣದಿಂದ ಉತ್ತಮ ಫಾರ್ಮ್​ನಲ್ಲಿ ಇರಲಿದ್ದಾರೆ

 ಹಾಗಾಗಿ ಮುಂದಿನ ಮ್ಯಾಚ್​ಗಳಲ್ಲಿ ಸಹ ಅವರು ಅದ್ಭುತವಾದ ಪ್ರದರ್ಶನ ತೋರಿಸಲಿದ್ದಾರೆ

ಶುಕ್ರ ತ್ರಿಕೋನ ಜನ್ಮ ಚಂದ್ರ ಮತ್ತು ಶನಿಯು ಕೊಹ್ಲಿಗೆ ವಿವಿಧ ಅವಕಾಶಗಳನ್ನ ನೀಡುತ್ತದೆ

ಅವರ ಜೀವನದಲ್ಲಿ ಸಂತೋಷ ಮೂಡುತ್ತದೆ. ವಿರಾಟ್ ಕೊಹ್ಲಿಯ ಜಾತಕವು ನಿರ್ದಿಷ್ಟ ರಾಜಯೋಗಗಳನ್ನು ಸಹ ಹೊಂದಿದ್ದು, ಇದು ಅದೃಷ್ಟವನ್ನ ಸೂಚಿಸುತ್ತದೆ

ವಿರಾಟ್ ಕೊಹ್ಲಿಯ ಜನ್ಮ ಚಾರ್ಟ್ ಪ್ರಕಾರ, ಅವರು ಎಲ್ಲಾ ಐಷಾರಾಮಿ ಜೀವನವನ್ನ ನಿಮ್ಮದಾಗಿಸಿಕೊಳ್ಳುತ್ತಾರೆ

ಜೀವನದುದ್ದಕ್ಕೂ ಸಮೃದ್ಧವಾಗಿರುತ್ತಾರೆ ಎನ್ನಬಹುದು. ಸದ್ಯ ಅವರ ಜಾತಕದಲ್ಲಿ ಗ್ರಹಗಳ ಸ್ಥಾನ ಬಹಳ ಉತ್ತಮವಾಗಿದೆ

ಉಪನಾಯಕನಾಗಿ ವಿಶ್ವಕಪ್ ಗೆಲುವಿಗೆ ರೂವಾರಿ ಆಗ್ತಾರಾ ಪಾಂಡ್ಯ? ಹಾರ್ದಿಕ್ ಜಾತಕ ಇದು

ವಿಶ್ವಕಪ್ ನಲ್ಲೂ ಮಿಂಚ್ತಾರಾ ಬ್ಯಾಟಿಂಗ್ ಸರದಾರ, ಸಾರಾ ದಾಖಲೆನೂ ಇವರದ್ದೇನಾ ? ಗಿಲ್ ಜಾತಕ ರಹಸ್ಯ