ಸಾಮಾನ್ಯವಾಗಿ ದೇವಸ್ಥಾನದಲ್ಲಿ ನಾವು ಒಳಗೆ ಹೋಗುತ್ತಿದ್ದ ಹಾಗೆ ಘಂಟೆಯನ್ನ ಬಾರಿಸುತ್ತೇವೆ

ಆದರೆ ಅನೇಕ ಜನರಿಗೆ ಏಕೆ ನಾವು ದೇವಸ್ಥಾನದಲ್ಲಿ ಘಂಟೆಯನ್ನ ಬಾರಿಸಬೇಕು ಎಂಬುದು ಗೊತ್ತಿಲ್ಲ. ಅದಕ್ಕೆ ಉತ್ತರ ಇಲ್ಲಿದೆ

ಸಾಮಾನ್ಯವಾಗಿ ನಾವು ದೇವಸ್ಥಾನಕ್ಕೆ ಹೋದಾಗ ಅನೇಕ ನಿಯಮಗಳನ್ನ ಫಾಲೋ ಮಾಡುತ್ತೇವೆ

ಮುಖ್ಯವಾಗಿ ದೇವಸ್ಥಾನದಲ್ಲಿ ತೀರ್ಥ ತೆಗೆದುಕೊಳ್ಳುವುದು ಹಾಗೂ ಕುಂಕುಮ ಹಚ್ಚಿಕೊಳ್ಳುವುದು ಹೀಗೆ, ಅನೇಕ ಕೆಲಸಗಳಿದೆ

ಹಾಗೆಯೇ, ನಾವು ಮುಖ್ಯವಾಗಿ ದೇವಸ್ಥಾನದ ಒಳಗೆ ಬರುವಾಗ ಘಂಟೆಯನ್ನ ಬಾರಿಸಿ, ನಂತರ ದೇವರಿಗೆ ಕೈ ಮುಗಿಯುತ್ತಾರೆ

ಆದರೆ ನಮ್ಮಲ್ಲಿ ಅನೇಕರಿಗೆ ಗಂಟೆ ಏಕೆ ಬಾರಿಸಬೇಕು ಎಂಬ ಬಗ್ಗೆ ಮಾಹಿತಿ ಇಲ್ಲ. ಸಂಶೋಧಕ ಉಮಾಕಾಂತ ರಾಣಿಂಗ ಈ ಕುರಿತು ಮಾಹಿತಿ ನೀಡಿದ್ದು, ಕಾರಣ ಇಲ್ಲಿದೆ

ನಮ್ಮ ಸಂಸ್ಕೃತಿಯಲ್ಲಿ ಧಾರ್ಮಿಕವಾಗಿ ಮತ್ತು ವೈಜ್ಞಾನಿಕವಾಗಿ ಈ ಘಂಟೆ ಬಾರಿಸುವುದು ಬಹಳ ಮುಖ್ಯವಾಗುತ್ತದೆ. ಘಂಟೆಯ ಕೂಗು ನಿಜವಾದ ನದಬ್ರಹ್ಮ ಎನ್ನಲಾಗುತ್ತದೆ

ದೇವರೊಂದಿಗೆ ಸಂಪರ್ಕ ಸಾಧಿಸಲು ಇದು ಸುಲಭವಾದ ಮಾರ್ಗ ಎನ್ನುವ ನಂಬಿಕೆ ಇದೆ

ಕರಾವಳಿಯ ದೈವ ಮೈಸೂರಿನಲ್ಲಿ ನೆಲೆಸಿ ಒಂದು ವರ್ಷ!

ಕೆಲವೊಮ್ಮೆ ದೇವಾಲಯದಲ್ಲಿ ದೇವತೆಗಳು ಸುಪ್ತ ಸ್ಥಿತಿಯಲ್ಲಿರುತ್ತಾರೆ ಹಾಗಾಗಿ ಅವರನ್ನ ಘಂಟೆ ಬಾರಿಸುವ ಮೂಲಕ ಎಬ್ಬಿಸಬೇಕು ಎನ್ನಲಾಗುತ್ತದೆ

ಹಾಗೆಯೇ, ಘಂಟೆಯಿಂದ ಧ್ವನಿ ತರಂಗಗಳು ಉತ್ಪತ್ತಿಯಾಗುತ್ತವೆ. ಆ ಧ್ವನಿ ತರಂಗಗಳು ನಮ್ಮ ಮನಸ್ಸಿನಲ್ಲಿರುವ ಕೆಟ್ಟ ಆಲೋಚನೆಗಳನ್ನ ಹೊರಗೆ ಹಾಕುತ್ತದೆ. ದೇವರಿಗೆ ಸಾಮಾನ್ಯವಾಗಿ ಘಂಟೆ, ಶಂಖ ಇತ್ಯಾದಿ ಶಬ್ದಗಳು ಇಷ್ಟವಾಗುತ್ತವೆ ಎನ್ನುವ ನಂಬಿಕೆ ಇದೆ

ಹಾಗಾಗಿ ಈ ಘಂಟೆ ಬಾರಿಸುವುದರಿಂದ ದೇವರು ಪ್ರಸನ್ನನಾಗುತ್ತಾನೆ ಹಾಗೂ ನಾವು ಬೇಡಿದ್ದನ್ನ ಕೊಡುತ್ತಾನೆ ಎನ್ನಲಾಗುತ್ತದೆ.

ಘಂಟೆ ಬಾರಿಸಿದಾಗ ಬಲವಾದ ಕಂಪನಗಳನ್ನು ಉಂಟುಮಾಡುತ್ತದೆ

Tirupati Darshan: ವೈಕುಂಠ ಏಕಾದಶಿಯಂದು ತಿಮ್ಮಪ್ಪನ ವಿಶೇಷ ದರ್ಶನ, ಟಿಕೆಟ್ ದರ ಕೇವಲ ಇಷ್ಟೇ!