ಹಿಂದಿನ ಕಾಲದಲ್ಲಿ ನಮ್ಮ ಪೂರ್ವಜರು ಬಾವಿಗಳನ್ನು ತೋಡಿ ಕೃಷಿಗಾಗಿ ನೀರನ್ನು ಸಂಗ್ರಹಿಸುತ್ತಿದ್ದರು

ಹಳೆಯ ಮನೆಗಳಲ್ಲಿ ಬಾವಿಗಳನ್ನು ನಿರ್ಮಿಸುತ್ತಿದ್ದರು. ಆದರೀಗ ಪಟ್ಟಣಗಳಲ್ಲಿ ಅಷ್ಟಾಗಿ ಯಾವುದೇ ಬಾವಿಗಳು ಕಾಣಸಿಗುವುದಿಲ್ಲ. ಆದರೆ ಹಳ್ಳಿಗಳಲ್ಲಿ ಇಂದಿಗೂ ಸಾಕಷ್ಟು ಬಾವಿಗಳಿದೆ

ಸಾಮಾನ್ಯವಾಗಿ ಹಳ್ಳಿಗಳ ಕಡೆ ಹೆಚ್ಚಾಗಿ ನೀವು ಬಾವಿಗಳನ್ನು ನೋಡಿರಬಹುದು. ಅಷ್ಟಕ್ಕೂ ಈ ಬಾವಿಗಳನ್ನು ಏಕೆ ನಿರ್ಮಿಸಲಾಗಿರುತ್ತದೆ? 

ಇದು ವೃತ್ತಾಕಾರದಲ್ಲಿ ಏಕೆ ಇರುತ್ತದೆ? ಬೇರೆ ಆಕಾರಗಳಲ್ಲಿ ಏಕೆ ಬಾವಿ ಇರುವುದಿಲ್ಲ ಅಂತ ಎಂದಾದರೂ ನಿಮಗೆ ಪ್ರಶ್ನೆ ಬಂದಿದ್ಯಾ? 

ಜಸ್ಟ್ ಇದೊಂದು ವಸ್ತು ಮನೆಯಲ್ಲಿದ್ರೆ ನಿಮಗೆ ಕೆಟ್ಟ ಕನಸು ಬರಲ್ವಂತೆ! ಏನದು?

ಹಾಗಾದ್ರೆ ನಿಮ್ಮ ಈ ಎಲ್ಲಾ ಪ್ರಶ್ನೆಗಳಿಗೆ ನಾವಿಂದು ಉತ್ತರ ನೀಡುತ್ತೇವೆ

ವೃತ್ತಾಕಾರದ ಬಾವಿಗಳು ಬಹಳ ಬಲವಾದ ಅಡಿಪಾಯವನ್ನು ಹೊಂದಿವೆ. ಇದಕ್ಕೆ ದೊಡ್ಡ ಕಾರಣವೆಂದರೆ ವೃತ್ತಾಕಾರದ ಬಾವಿಗೆ ಯಾವುದೇ ಮೂಲೆಗಳಿರುವುದಿಲ್ಲ 

ಅದು ಬಾವಿಯ ಸುತ್ತಲಿನ ನೀರಿನ ಒತ್ತಡವನ್ನು ಸಮಾನವಾಗಿರಿಸುತ್ತದೆ

ಆದರೆ, ಒಂದು ವೇಳೆ ಬಾವಿ ವೃತ್ತಾಕಾರದಲ್ಲಿ ಇರದೇ ಚೌಕಕಾರದಲ್ಲಿದ್ದರೆ, ನೀರಿನ ಒತ್ತಡವು ನಾಲ್ಕು ಮೂಲೆಗಳಲ್ಲಿ ಇರುತ್ತದೆ. ಹೀಗಾಗಿ ಬಾವಿ ಹೆಚ್ಚು ಕಾಲ ಉಳಿಯುವುದಿಲ್ಲ

ಅದರಲ್ಲಿಯೂ ಹೆಚ್ಚಾಗಿ ಬಾವಿ ಕುಸಿತದ ಅಪಾಯವು ಇರುತ್ತದೆ. ಹಾಗಾಗಿ ಜಗತ್ತಿನಾದ್ಯಂತ ಬಾವಿಗಳನ್ನು ವೃತ್ತಾಕಾರದಲ್ಲಿ ತಯಾರಿಸಲಾಗುತ್ತದೆ

ಬಾವಿ ಕಲುಷಿತವಾಗುವುದಿಲ್ಲ: ಬಾವಿಗಳು ತಲೆಮಾರುಗಳವರೆಗೆ ಇರಲು ಕಾರಣ ಅವು ವೃತ್ತಾಕಾರದಿಂದ ಇರುವುದು

ಅಂದರೆ ವೃತ್ತಾಕಾರದ ಬಾವಿಯಲ್ಲಿ ಏಕರೂಪದ ಒತ್ತಡವಿರುವುದರಿಂದ ಮಣ್ಣು ಕುಸಿಯುವ ಸಾಧ್ಯತೆ ತೀರಾ ಕಡಿಮೆ

ಬಾವಿಯು ವೃತ್ತಾಕಾರದಲ್ಲಿರಲು ಮತ್ತೊಂದು ಕಾರಣವೆಂದರೆ ಚೌಕ ಅಥವಾ ತ್ರಿಕೋನಕಾರದ ಬಾವಿಗಳಿಗಿಂತ ವೃತ್ತಾಕಾರದ ಬಾವಿಯನ್ನು ವಿನ್ಯಾಸಗೊಳಿಸುವುದು ತುಂಬಾ ಸುಲಭ

ರಾತ್ರಿಯೆಲ್ಲಾ ನಿದ್ರೆ ಮಾಡಲು ಬಿಡ್ತಿಲ್ವಾ ತಿಗಣೆ? ಹಾಗಾದ್ರೆ ಈ ಟ್ರಿಪ್ಸ್ ಫಾಲೋ ಮಾಡಿ ಒಂದು ಇರಲ್ಲ!