ಸದಾ ಕೋಮು ವಿಚಾರಕ್ಕೆ ಸುದ್ದಿಯಾಗುತ್ತಿರುವ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಾದರಿ ಇಫ್ತಾರ್‌ವೊಂದು ಜರುಗಿತು

ರಂಝಾನ್‌ ತಿಂಗಳಲ್ಲಿ ಸಂಜೆಯಾಗುತ್ತಲೇ ಇಫ್ತಾರ್‌ ಸಂಭ್ರಮ ಕಂಡು ಬರೋದು ಸಹಜ

ಆದ್ರೆ, ಭಾನುವಾರ ಸಂಜೆ ಈ ಮಸೀದಿಯಲ್ಲಿ ನಡೆದ ಇಫ್ತಾರ್‌ ಅದೆಲ್ಲಕ್ಕೂ ಭಿನ್ನ

ಕಾರಣ, ಕೋಮುಸೂಕ್ಷ್ಮ ಅಂತಾ ಹಣೆಪಟ್ಟಿ ಕಟ್ಟಿಕೊಂಡ ಜಿಲ್ಲೆಯೊಂದು ಮಾದರಿ ಇಫ್ತಾರ್‌ ಕೂಟಕ್ಕೆ ಸಾಕ್ಷಿಯಾಯಿತು

Turmeric Crop: ಅತಿ ಹೆಚ್ಚು ಬೆಲೆಗೆ ಅರಿಶಿನ ಮಾರಾಟ ಮಾಡಿದ ಬೆಳಗಾವಿಯ ರೈತ!

ಊರ ದೈವಸ್ಥಾನವೊಂದು ಮಸೀದಿಯಲ್ಲಿ ಇಫ್ತಾರ್‌ ಆಯೋಜಿಸಿ ಭಾವೈಕ್ಯತೆಗೆ ಹೊಸ ಷರಾ ಬರೆಯಿತು

ಹೌದು, ಇಂತಹ ಅಪರೂಪದ ಕ್ಷಣಕ್ಕೆ ಸಾಕ್ಷಿಯಾಗಿದ್ದು ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕು

ಇಲ್ಲಿನ ಕೆದಿಲ ಶ್ರೀಉಳ್ಳಾಕ್ಲು ಧೂಮಾವತಿ ದೈವಸ್ಥಾನದ ಆಡಳಿತ ಮಂಡಳಿ ತನ್ನೂರಿನ ಮಸೀದಿಯಲ್ಲಿ ಉಪವಾಸ ವೃತಾಚರಣೆಯಲ್ಲಿರುವ ಮುಸ್ಲಿಂ ಸಮುದಾಯದವರಿಗಾಗಿ ಇಫ್ತಾರ್ ಕೂಟ ಆಯೋಜಿಸಿತ್ತು

ಈ ಕ್ಷಣಕ್ಕೆ ಪಾಟ್ರಕೋಡಿ ಮುಹಿಯುದ್ದೀನ್ ಜುಮಾ ಮಸೀದಿಯ ಎಲ್ಲ ಸದಸ್ಯರ ಜೊತೆಗೆ ದೈವಸ್ಥಾನದ ಪ್ರಮುಖರು ಕೂಡಾ ಸಾಕ್ಷಿಯಾದರು

Belagavi Holi: ಬೆಳಗಾವಿಯಲ್ಲಿ ಸಂಭ್ರಮದಿಂದ ನಡೆದ ಹೋಳಿ ಹಬ್ಬ!