ಭವ್ಯ ರಾಮಮಂದಿರವು ಇದೇ ಜನವರಿ 22 ರಂದು ಲೋಕಾರ್ಪಣೆಗೊಳ್ಳಲಿದೆ. ಹಿಂದೂಗಳ ಬಹುದಿನಗಳ ಕನಸು ಸಕಾರಗೊಳ್ಳುತ್ತಿದೆ
ಕಿಷ್ಕಂದಾ ಪ್ರದೇಶ ಹೊಂದಿರುವ ಕೊಪ್ಪಳ ಜಿಲ್ಲೆಯಲ್ಲಿ ರಾಮ, ಲಕ್ಷ್ಮಣರು ನಡೆದಾಡಿರುವ ಗುರುತುಗಳಿವೆ
ಅವುಗಳಲ್ಲಿ ನೀರಿಗಾಗಿ ಬಾಣ ಬಿಟ್ಟು ಪಾತಾಳದಿಂದ ಗಂಗೆಯನ್ನು ತಂದ ಎನ್ನುವ ಸ್ಥಳವು ಕೊಪ್ಪಳ ತಾಲೂಕಿನ ಭೈರಾಪುರದಲ್ಲಿದೆ
ರಾಮಾಯಣದಲ್ಲಿ ಬರುವ ಸೀತಾಪಹರಣದ ನಂತರ ಶ್ರೀರಾಮಚಂದ್ರ ಸೀತೆಯನ್ನು ಅರಸುತ್ತಾ ಉತ್ತರದಿಂದ ದಕ್ಷಿಣದ ಕಡೆ ಬಂದ
ರಾಮ ಮಂದಿರ ಪ್ರಾಣ ಪ್ರತಿಷ್ಠೆಗೂ ಮುನ್ನ 11 ದಿನಗಳವರೆಗೆ ಉಪವಾಸ ಮಾಡ್ತಿರುವ ಪ್ರಧಾನಿ! ನಿಮ್ಮ ಉಪವಾಸ ಹೇಗಿರಬೇಕು ನೋಡಿ
ಈಗಿನ ನಾಸಿಕದಿಂದ ಕಿಷ್ಕಂದಾಕ್ಕೆ ಬಂದರು ಎಂಬುವುದು ಇದೆ
ಪಿತೃತರ್ಪಣಕ್ಕೆ ನೀರು ಸಿಗದ ಹಿನ್ನೆಲೆಯಲ್ಲಿ ಭೂಮಿಯೊಳಗೆ ಬಾಣ ಬಿಟ್ಟು ಗಂಗೆಯನ್ನು ತಂದ ಎಂಬ ಪ್ರತೀತಿ ಇದೆ
ಸುಮಾರು 8 ಲಕ್ಷ ವರ್ಷಗಳ ಹಿಂದೆಯೇ ಇಲ್ಲೊಂದು ದೇವಾಲಯವಿತ್ತು. ಈ ದೇವಾಲಯದಲ್ಲಿ ಭೈರಮುನಿ ಎಂಬುವವರು ವಾಸವಾಗಿದ್ದರು
ಇದೇ ಕಾರಣಕ್ಕೆ ಈ ಊರಿಗೆ ಭೈರವಪುರ ಎಂಬ ಹೆಸರು ಬಂತು.ಇಲ್ಲಿ ದೇವಾಲಯವಿತ್ತು ಎಂಬುವದಕ್ಕೆ ಶ್ರೀರಾಮಚಂದ್ರನ ಪಾದುಕೆಗಳು ಇರುವ ಸ್ಥಳದ ಎದುರು ಈಶ್ವರನ ಮೂರ್ತಿ ಇರುವುದು ಕಾಣುತ್ತಿವೆ
ಶ್ರೀರಾಮನಿಗಿಂತ ದೊಡ್ಡದೊಂದಿದೆ, ಅದೇನು ಗೊತ್ತಾ?
ರಾಮಾಯಣದ ಕಾಲದಲ್ಲಿ ಇರುವ ಹಲವು ಐತಿಹ್ಯಗಳ ಆಧಾರದಲ್ಲಿ ಇದು ರಾಮ ನಡೆದಾಡುವ ಸ್ಥಳ ಎಂದು ಹೇಳಲಾಗುತ್ತಿದೆ
ಇದೇ ರೀತಿಯ ಕುರುಹುಗಳು ಭೈರಾಪುರದಲ್ಲಿ ಈಗಲೂ ಕಾಣುತ್ತಿವೆ. ಒಂದೇ ದೇವಸ್ಥಾನದಲ್ಲಿ ಅಜಾನುಭಾವನಾಗಿರುವ ಶ್ರೀರಾಮಚಂದ್ರನ ಆತ ದೈಹಿಕ ಗಾತ್ರಕ್ಕೆ ತಕ್ಕಂತೆ ಇರುವ ಪಾದಗಳು ಕಾಣುತ್ತವೆ
ಈ ಪಾದಗಳು ಉಬ್ಬು ಶಿಲೆಯಲ್ಲಿರದೆ ನೆಲದ ಮೇಲೆ ಮೂಡಿರುವ ಪಾದಗಳಂತೆ ಇವೆ. ಈ ಪಾದಗಳ ಪಕ್ಕದಲ್ಲಿ ಬಂಡೆಯಲ್ಲಿ ಸೀಳಿಕೊಂಡು ಜಲ ಹೊರಬರುತ್ತಿರುವ ಬಾವಿ ಇದೆ
ಇದನ್ನು ರಾಮ ಹೊಂಡ ಎಂದು ಕರೆಯುತ್ತಾರೆ. ಶತಮಾನಗಳಿಂದ ಈ ಬಾವಿ ಬತ್ತಿಲ್ಲ. ಭೀಕರ ಬರದ ಸಂದರ್ಭದಲ್ಲಿಯೂ ಇಲ್ಲಿ ನೀರು ಇರುವುದು ಕಾಣುತ್ತೇವೆ
ಜನವರಿ 22 ರಂದು ರಾಮಮಂದಿರ ಉದ್ಘಾಟನೆಯ ಸಂದರ್ಭದಲ್ಲಿ ವಿಶೇಷ ಪೂಜೆ. ಸಂಜೆ ದೀಪಾಲಂಕಾರ ಮಾಡಲು ಸಿದ್ದತೆಯನ್ನು ದೇವಸ್ಥಾನ ಆಡಳಿತ ಮಂಡಳಿಯವರು ಮಾಡಿಕೊಂಡಿದ್ದಾರೆ