ದಶರಥನಿಗೆ 4 ಗಂಡು ಮಕ್ಕಳಿದ್ದರು ಎಂಬುವುದು ಗೊತ್ತಿದೆ, ಆದ್ರೆ ಶ್ರೀರಾಮನಿಗೆ ಒಬ್ಬಳು ಅಕ್ಕ ಇದ್ದಳು ಎನ್ನುವುದು ಹಲವರಿಗೆ ತಿಳಿದಿಲ್ಲ
ಶ್ರೀರಾಮನ ಸಹೋದರಿ ದಶರಥನ ಎಲ್ಲಾ ಮಕ್ಕಳಿಗಿಂತಲೂ ದೊಡ್ಡವಳಾಗಿದ್ದಳು
ಆಕೆಯ ಜನನದ ಬಗ್ಗೆ ಒಂದು ರೋಚಕ ಕಥೆಯಿದೆ. ಬನ್ನಿ ತಿಳಿಯೋಣ
ಒಮ್ಮೆ ದಶರಥನು ಕಾಡಿಗೆ ಬೇಟೆಗೆ ಅಂತ ಹೋಗುತ್ತಾನೆ. ಜಿಂಕೆಯನ್ನು ಬೆನ್ನಟ್ಟುತ್ತಾ ಮುಂದೆ ಚಲಿಸುತ್ತಿದ್ದಂತೆ ದಶರಥ ‘ಸ್ತ್ರೀ ಶಕ್ತಿ’ಗೆ ಮೀಸಲಾದ ಮಾಂತ್ರಿಕವಾದ ಪವಿತ್ರ ಕಾಡಿಗೆ ತನಗರಿವಿಲ್ಲದಂತೆ ಪ್ರವೇಶ ಮಾಡುತ್ತಾನೆ
ಹಾಗಾಗಿ ಮಾಂತ್ರಿಕ ಶಕ್ತಿಯಿಂದ ದಶರಥನು ಹೆಣ್ಣಾಗಿ ಬದಲಾಗುತ್ತಾನೆ
ಹಲವು ವರ್ಷಗಳ ಕಾಲ ಆ ತೋಪಿನಲ್ಲಿ ಹೆಣ್ಣಿನ ರೂಪದಲ್ಲಿ ವಾಸವಾಗಿದ್ದ ದಶರಥ, ಒಮ್ಮೆ ಒಬ್ಬ ವ್ಯಕ್ತಿಯ ಸಂಪರ್ಕಕ್ಕೆ ಬರುತ್ತಾನೆ. ಹೆಣ್ಣಾಗಿದ್ದ ದಶರಥನ ಜೊತೆ ಏಕಾಂತದಲ್ಲಿ ಕಳೆದು ಕೊನೆಗೆ ಹೆಣ್ಣಾಗಿದ್ದ ದಶರಥ ಗರ್ಭ ಧರಿಸಿ ಹೆಣ್ಣು ಮಗುವಿಗೆ ಜನ್ಮ ನೀಡುತ್ತಾರೆ
ಅವಳ ಹೆಸರು ಶಾಂತ ಎಂದು. ಅವಳನ್ನು ಅಂಗ ರಾಜ್ಯದ ರಾಜ ರೊಂಪಾದನಿಗೆ ಮಕ್ಕಳಿಲ್ಲದ ಕಾರಣ ದಶರಥ ಮಹಾರಾಜನು ತನ್ನ ಮಗಳಾದ ಶಾಂತಾಳನ್ನು ಅಂಗ ರಾಜ್ಯದ ರಾಜನಿಗೆ ನೀಡಿದನು
ಅಂಗ ರಾಜ್ಯದ ರಾಜ ರೊಂಪಾದ ಮತ್ತು ಆತನ ಪತ್ನಿ ಅಂಗ ರಾಜ್ಯದ ರಾಣಿ ವರ್ಷಿಣಿಯು ಆ ಮಗುವನ್ನು ಚೆನ್ನಾಗಿ ಸಾಕಿ ಸಲುಹಿದರು ನಂತರ ಆಕೆ ಮದುವೆ ವಯಸ್ಸಿಗೆ ಬಂದಾಗ ಆಕೆಯನ್ನು ಋಷಿ ರುಷ್ಯಶೃಂಗನೊಂದಿಗೆ ವಿವಾಹ ಮಾಡಿಕೊಡಲಾಯಿತು
ಜಲಪಾತದ ಗುಹೆಯೊಳಗೆ ನುಗ್ಗಿದಾತ ನಾಪತ್ತೆ! ಮುಂದೇನಾಯ್ತು ಗೊತ್ತಾ?