ಉತ್ತರ ಕನ್ನಡ: ಉತ್ತರ ಕನ್ನಡ ಜಿಲ್ಲೆಯಲ್ಲೇ ಮೊದಲ ಬಾರಿಗೆ ಫ್ಲೋಟಿಂಗ್ ಬ್ರೀಡ್ಜ್ ಆರಂಭವಾಗಿದೆ
ಪ್ರವಾಸಿಗರಿಗೆ ಮುದ ನೀಡಲು ಮುರುಡೇಶ್ವರದಲ್ಲಿ ಫ್ಲೋಟಿಂಗ್ ಬ್ರಿಡ್ಜ್ ಪಾರಂಭ ಮಾಡಲಾಗಿದೆ
ಕರ್ನಾಟಕದ ಅತಿದೊಡ್ಡ ತೇಲುವ ಸೇತುವೆ ಇದಾಗಿದೆ
ಮುರ್ಡೇಶ್ವರದ ಮುಖ್ಯ ಕಡಲ ತೀರದಲ್ಲಿ ತೇಲುವ ಸೇತುವೆಯನ್ನು ಜಿಲ್ಲಾ ಪ್ರವಾಸೋದ್ಯಮ ಇಲಾಖೆ ನಿರ್ಮಿಸಿದೆ
ಸಂಭ್ರಮದಿಂದ ನಡೆದ ಶ್ರೀ ಮರಡಿ ಬಸವೇಶ್ವರ ರಥೋತ್ಸವ, 50 ಸಾವಿರಕ್ಕೂ ಹೆಚ್ಚು ಭಕ್ತರು ಭಾಗಿ!
ಇದನ್ನೂ ಓದಿ
130 ಮೀಟರ್ ಉದ್ದ, 3.50 ಅಗಲ ಇರುವ ಈ ಸೇತುವೆ ನಿಮಗೆ ನಿಂತಲ್ಲೇ ಸಫಿರ್ಂಗ್ ಅನುಭವ ಕೊಡಬಲ್ಲ ಮನೋರಂಜನೆಯ ತಾಣವಾಗಿದೆ
ಕರ್ನಾಟಕದ ಅತಿ ದೊಡ್ಡ ತೇಲುವ ಸೇತುವೆ ಈ ಹಿಂದೆ ಮಲ್ಪೆಯಲ್ಲಿ ನಿರ್ಮಿಸಲಾಗಿದ್ದ ತೇಲು ಸೇತುವೆಗಿಂತ ಇದು ಹತ್ತು ಮೀಟರ್ ದೊಡ್ಡದಾಗಿದೆ
ಮನಮೋಹಕವಾದ ಬ್ರಿಡ್ಜ್ ಮೊದಲು 100 ರೂಪಾಯಿ ಎಂಟ್ರೆನ್ಸ್ ಫೀಸ್ ಕೊಟ್ಟು ಸೇತುವೆಗೆ ಎಂಟ್ರಿ ಪಡೆದುಕೊಳ್ಳಬೇಕು. ನಂತರ ಜ್ಯಾಕೇಟ್ ಗಳನ್ನು ಒದಗಿಸಲಾಗುವುದು
ಆ ಜ್ಯಾಕೇಟ್ ಧರಿಸಿ ನೀವು ಸಮುದ್ರದ ಮೇಲೆ ಅಲೆಗಳ ಜೊತೆಗೆ ತೇಲುವ ಅನುಭವ ಪಡೆಯಬಹುದು
ಎರಡೂ ಕಡೆ ಆಧಾರಕ್ಕೆ ಗಟ್ಟಿಯಾದ ದಾರವನ್ನು ಜೊತೆಗೆ ಕಂಬಿಗಳನ್ನು ಅಳವಡಿಸಲಾಗಿದೆ. ಎಂಡ್ ಪಾಯಿಂಟ್ ಮನಮೋಹಕವಾಗಿದ್ದು ಚೌಕಾಕಾರವಾಗಿದೆ
ಹೀಗಾಗಿ ಜಾಸ್ತಿ ಜನರು ನಿಲ್ಲುವಷ್ಟು ವಿಸ್ತಾರವಿದೆ
ಪಿ ಇ ಮಾಡ್ಯುಲರ್ ಡಾಕ್ಸ್ ಗಳಿಂದ ಈ ಸೇತುವೆ ನಿರ್ಮಾಣವಾಗಿದೆ. ಇದು ಫ್ಲೆಕ್ಸಿಬಲ್ ಮತ್ತು ಯ್ಯಾಂಟಿ ಸ್ಕಿಪ್ ಡಿಸೈನ್ ಇಂದ ಆಗಿರುವುದರಿಂದ ಜಾರುವ ಹೆದರಿಕೆ ಇರುವುದಿಲ್ಲ
ಏಕಕಾಲದಲ್ಲಿ 100ಜನ ಓಡಾಡ ಬಹುದಾದ ಮುಂಬೈನ ಎಚ್.ಎನ್ ಮರೈನ್ ಕಂಪನಿಯಿಂದ ನಿರ್ಮಾಣವಾಗಿದೆ ಈ ಬ್ರಿಡ್ಜ್. ಮುರೇಶ್ವರಕ್ಕೆ ಬಂದ್ರೆ ಇದನ್ನು ಮಿಸ್ ಮಾಡ್ದೇ ಎಂಜಾಯ್ ಮಾಡಿ
ಹುಟ್ಟಿದ ಒಂದೇ ದಿನಕ್ಕೆ ತಾಯಿಯಿಂದ ಬೇರ್ಪಟ್ಟಿದ್ದ ಮರಿಯಾನೆ ಕೊನೆಗೂ ಅಮ್ಮನ ಮಡಿಲು ಸೇರಿತು!
ಇದನ್ನೂ ಓದಿ