ಒದ್ದೆಯಾಗಿರುವ ಅಥವಾ ತಣ್ಣಗಿರುವ ಈರುಳ್ಳಿ ಮೊಳಕೆಯೊಡೆದಿರುವುದನ್ನು ನೀವು ಗಮನಿಸಿರಬಹುದು
ಕೆಲವೊಮ್ಮೆ ನೀವು ಈರುಳ್ಳಿಯನ್ನು ಕತ್ತರಿಸಿದಾಗ, ಅದು ಒಳಗಿನಿಂದ ಮೊಳಕೆಯೊಡೆಯಲು ಪ್ರಾರಂಭಿಸಿರುತ್ತದೆ
ಅಂತಹ ಈರುಳ್ಳಿಯನ್ನು ಬಳಸದೇ ಬೀಸಾಡುತ್ತೇವೆ. ಆದರೆ ಮೊಳಕೆಯೊಡೆದ ಈರುಳ್ಳಿಯನ್ನು ತಿನ್ನುವುದು ಒಳ್ಳೆಯದೋ ಅಥವಾ ಕೆಟ್ಟದ್ದೋ ಎಂಬುವುದರ ಬಗ್ಗೆ ನೀವು ಎಂದಾದರೂ ಯೋಚಿಸಿದ್ದೀರಾ?
ಅಷ್ಟಕ್ಕೂ ಮೊಳಕೆಯೊಡೆದ ಈರುಳ್ಳಿ ಎಂದರೇನು?: ಈರುಳ್ಳಿಯ ತುದಿಯಿಂದ ಹಸಿರು ಚಿಗುರುಗಳು ಹೊರಹೊಮ್ಮಿದಾಗ ಮಾತ್ರ ನಾವು ಮೊಳಕೆಯೊಡೆದ ಈರುಳ್ಳಿಯನ್ನು ಕಾಣುತ್ತೇವೆ
ನೈಲ್ ಕ್ಲಿಪ್ಪರ್ ಹೀಗೆ ಮಾಡಿದ್ರೆ ಲಾಕ್ ಆಗುತ್ತೆ; ಜಸ್ಟ್ ಈ ಟ್ರಿಕ್ಸ್ ಟ್ರೈ ಮಾಡಿ!
ವಾಸ್ತವಾಗಿ ಹೇಳುವುದಾದರೆ ಈ ಈರುಳ್ಳಿ ತಿನ್ನಲು ಸುರಕ್ಷಿತವಾಗಿದೆ. ಆದರೆ, ಕೆಲವರು ಇದರ ರುಚಿ ಮತ್ತು ಸುವಾಸನೆಯನ್ನು ಇಷ್ಟಪಡುವುದಿಲ್ಲ
ಮತ್ತೆ ಕೆಲವರು ಈ ರೀತಿಯ ಈರುಳ್ಳಿಯನ್ನು ಅಡುಗೆಗೆ ಬಳಸಲು ಬಯಸುತ್ತಾರೆ
ಇದರಲ್ಲಿ ಸಾಕಷ್ಟು ಪೌಷ್ಟಿಕಾಂಶವಿದೆ. ಮೊಳಕೆಯೊಡೆದ ಈರುಳ್ಳಿಯ ರುಚಿಯು, ದೃಢತೆ, ಮನಸ್ಸು ಇತ್ಯಾದಿಗಳನ್ನು ಬದಲಾಯಿಸುತ್ತದೆ
ಅಂತೆಯೇ, ಪೌಷ್ಟಿಕಾಂಶದ ಸಂಯೋಜನೆಯು ಬದಲಾಗುತ್ತದೆ
ಇಂತಹ ಮೊಳಕೆಯೊಡೆದ ಈರುಳ್ಳಿಯಲ್ಲಿ ಉತ್ಕರ್ಷಣ ನಿರೋಧಕ ಪೋಷಕಾಂಶಗಳು ಮತ್ತು ಫೈಟೊಕೆಮಿಕಲ್‌ಗಳು ಸಮೃದ್ಧವಾಗಿವೆ
ಮಸಲ್ ಬಿಲ್ಡ್ ಮಾಡಲು ಜಿಮ್‌ಗೆ ಹೋಗುತ್ತಿದ್ದರೆ, ನಿಮಗೆ ಈ ಆಹಾರಗಳೇ ಬೆಸ್ಟ್
ಆದರೂ ಈ ಈರುಳ್ಳಿಯಲ್ಲಿ ಖನಿಜಗಳ ಕೊರತೆಯಿದೆ. ಹಾಗಾಗಿ ಇದನ್ನು ಅಡುಗೆಗೆ ಬಳಸಬೇಕೋ? ಇಲ್ಲವೋ ತಿಳಿಯೋಣ ಬನ್ನಿ
ಸುವಾಸನೆ ಮತ್ತು ದೃಢತೆ: ಇದರ ರುಚಿ ಬದಲಾಗದ ಈರುಳ್ಳಿಗಿಂತ ಭಿನ್ನವಾಗಿ ಮತ್ತು ಹಗುರವಾಗಿರುತ್ತದೆ. ಕೆಲವರಿಗೆ ಇದರ ರುಚಿ ಇಷ್ಟವಾಗದಿರಬಹುದು
ಮೊಳಕೆ ಬಂದಿರುವುದನ್ನು ತೆಗೆದುಹಾಕಬಹುದು: ನೀವು ಈರುಳ್ಳಿಯಿಂದ ಮೊಳಕೆ ಬಂದಿರುವುದನ್ನು ತೆಗೆದುಹಾಕಿ, ಅವುಗಳನ್ನು ಎಂದಿನಂತೆ ಅಡುಗೆಗೆ ಬಳಸಬಹುದು