ಅನೇಕ ಬಾರಿ ಚೂಯಿಂಗ್ ಗಮ್ ಅನ್ನು ಆಕಸ್ಮಿಕವಾಗಿ ಅಥವಾ ಅಜಾಗರೂಕತೆಯಿಂದ ನಾವು ನುಂಗಿ ಬಿಡುತ್ತೇವೆ
ಆದರೆ ಈ ಚ್ಯೂಯಿಂಗ್ ಗಮ್ ಹೊಟ್ಟೆಗೆ ಹೋದರೆ ಏನಾಗುತ್ತದೆ ಎಂದು ನೀವು ಎಂದಾದರೂ ಯೋಚಿಸಿದ್ದೀರಾ?
ಇದು ಆರೋಗ್ಯದ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂದು ನಾವಿಂದು ತಿಳಿಯೋಣ ಬನ್ನಿ
ಅನೇಕ ಮಂದಿಗೆ ಚೂಯಿಂಗ್ ಗಮ್ ಅಗಿಯುವ ಅಭ್ಯಾಸವಿರುತ್ತದೆ
ಟೋಬಿ ಬೆಡಗಿಯ ಬೋಲ್ಡ್ ಅವತಾರ!
ದುರ್ವಾಸನೆ ಹೋಗಲಾಡಿಸುವುದರಿಂದ ಹಿಡಿದು ಬಾಯಿಗೆ ಚೂಯಿಂಗ್ ಗಮ್ ವ್ಯಾಯಾಮವನ್ನು ನೀಡುತ್ತದೆ
ಒಮ್ಮೆ ಚೂಯಿಂಗ್ ಗಮ್ ಹೊಟ್ಟೆಯೊಳಗೆ ಸೇರಿದರೆ ಅದು ವರ್ಷಗಟ್ಟಲೇ ಹಾಗೆಯೇ ಇರುತ್ತದೆ ಎಂದು ಹೇಳುವುದನ್ನು ನೀವು ಕೇಳಿರುತ್ತೀರಾ? ಈ ಮಾತು ಸತ್ಯವಲ್ಲ
ಆದರೆ ಮಕ್ಕಳಿಗೆ ಚ್ಯೂಯಿಂಗ್ ಗಮ್ ನೀಡದೇ ಇರುವುದು ಒಳ್ಳೆಯದು. ಮಕ್ಕಳನ್ನು ಹೊರತು ಪಡಿಸಿ ದೊಡ್ಡವರು ಚ್ಯೂಯಿಂಗ್ ನುಂಗಿದರೂ ಅಪಾಯವೇನೂ ಇಲ್ಲ
ಯಾಕೆಂದರೆ ಕೆಲವರ ಪ್ರಕಾರ ವಾರದೊಳಗೆ ಅದು ಜೀರ್ಣವಾಗುತ್ತದೆ
ಗರ್ಭಿಣಿಯರು ತಪ್ಪದೇ ತಿನ್ನಲೇಬೇಕಾದ ಆಹಾರಗಳಿವು!
ಹಿಂದೆ, ಚೂಯಿಂಗ್ ಗಮ್ ಅನ್ನು ಸಿಹಿಕಾರಕಗಳು, ವಿವಿಧ ಸುವಾಸನೆಗಳು, ಸಂರಕ್ಷಕಗಳು ಮತ್ತು ಮೃದುಗೊಳಿಸುವ ಪದಾರ್ಥಗಳೊಂದಿಗೆ ತಯಾರಿಸಲಾಗುತ್ತಿತ್ತು
ಇದು ನಮ್ಮ ದೈನಂದಿನ ಆಹಾರದಲ್ಲಿ ಇರಿಸಲಾಗಿತ್ತು ಮತ್ತು ಜೀರ್ಣಕ್ರಿಯೆಗೂ ಯಾವುದೇ ಅಡಚಣೆಯನ್ನು ಉಂಟುಮಾಡುವುದಿಲ್ಲ ಎನ್ನಲಾಗುತ್ತಿತ್ತು
ಆದರೆ ಇತ್ತೀಚಿನ ದಿನಗಳಲ್ಲಿ ಸಿಂಥೆಟಿಕ್ ಪಾಲಿಮರ್ಗಳು ಅಥವಾ ಎಲಾಸ್ಟೊಮರ್ಗಳು, ರಬ್ಬರ್ ತರಹದ ವಸ್ತುಗಳನ್ನು ಚೂಯಿಂಗ್ ಗಮ್ ತಯಾರಿಸಲು ಬಳಸಲಾಗುತ್ತದೆ. ಇದು ಆರೋಗ್ಯಕ್ಕೆ ಹಾನಿಕಾರಕವಾಗಿದೆ
ಅತಿಯಾದ ಸೇವನೆಯು ಜೀರ್ಣಾಂಗ ವ್ಯವಸ್ಥೆಯ ಕಾರ್ಯನಿರ್ವಹಣೆಯ ಮೇಲೆ ಪರಿಣಾಮ ಬೀರುತ್ತದೆ ಮತ್ತು ಉಸಿರಾಟಕ್ಕೆ ತೊಂದರೆಗಳನ್ನು ಉಂಟುಮಾಡುತ್ತದೆ