ಮುಳ್ಳಯ್ಯನಗಿರಿಯ ತಪ್ಪಲಿನಲ್ಲಿರುವ ಈ ಕೆರೆಯಂತೂ ಪ್ರಕೃತಿಯ ವಿಸ್ಮಯವೇ ಸರಿ!

ಚಿಕ್ಕಮಗಳೂರಿನ ಮುಳ್ಳಯ್ಯನಗಿರಿಯ ತಪ್ಪಲಿನಲ್ಲಿರುವ ಹಿರೇಕೊಳಲೆ ಕೆರೆಯು ವಾಯುವಿಹಾರಕ್ಕೆ ಹೇಳಿಟ್ಟಂತಿದೆ

ಕಾಫಿನಾಡು ಗಿರಿ, ಶಿಖರಗಳಿಗೆ ಭಾರೀ ಫೇಮಸ್

ನೈಸರ್ಗಿಕವಾಗಿಯೂ ಗಮನ ಸೆಳೆಯುವ ಚಿಕ್ಕಮಗಳೂರು ಜಿಲ್ಲೆ ಮಳೆಗಾಲಕ್ಕೆ ಮದುವಣಗಿತ್ತಿಯಂತೆ ಕಂಗೊಳಿಸಲು ಆರಂಭಿಸುತ್ತೆ

ಅಂತಹ ಸಾಲಿನಲ್ಲಿ ಮುಳ್ಳಯ್ಯನಗಿರಿಯ ತಪ್ಪಲಿನಲ್ಲಿ ಕಂಡು ಬರುವ ಹಿರೇಕೊಳಲೆ ಕೆರೆ ಕೂಡಾ ಒಂದು

ಈ ಕೆರೆ ನೋಡಲು ಅದೆಷ್ಟು ಆಕರ್ಷಣೀಯವೋ

ಚಿಕ್ಕಮಗಳೂರು ಜಿಲ್ಲೆಯ ಕುಡಿಯುವ ನೀರಿನ ಮೂಲವೂ ಹೌದು

ಚಿಕ್ಕಮಗಳೂರು ನಗರದದಿಂದ 8 ಕಿಲೋ ಮೀಟರ್ ದೂರದಲ್ಲಿರುವ ವಾಯು ವಿಹಾರಕ್ಕೆ ಹೇಳಿಟ್ಟ ತಾಣವೂ ಆಗಿದೆ

ಸೆಪ್ಟೆಂಬರ್ ನಿಂದ ಮಾರ್ಚ್ ವರೆಗೆ ಹಿರೇಕೊಳಲೆ ಕೆರೆ ನೋಡುವುದೇ ಒಂದು ಚೆಂದ

ಚಳಿಗಾಲದ ಆ ಮಂಜು ಮುಸುಕಿದ ವಾತಾವರಣದಲ್ಲಿ ಹಿರೇಕೊಳಲೆ ಕೆರೆ ಸುತ್ತಲಿನ ಹಸಿರ ಬೆಟ್ಟಗಳು ಸಂಪೂರ್ಣವಾಗಿ ಆವೃತವಾಗಿ ಗಮನ ಸೆಳೆಯುತ್ತದೆ

ಆದರೆ ಹಿರೇಕೊಳಲೆ ಕೆರೆ ಚಿಕ್ಕಮಗಳೂರು ನಗರದಿಂದ 8 ಕಿಲೋ ಮೀಟರ್ ದೂರದಲ್ಲಿದ್ದರೂ ಇಲ್ಲಿಗೆ ತೆರಳಲು ಯಾವುದೇ ಬಸ್‌ಗಳಿಲ್ಲ

ಇಲ್ಲಿಗೆ ಹೋಗುವುದಿದ್ದರೆ, ಸ್ವಂತ ವಾಹನವಷ್ಟೇ ಬೇಕು. ಒಂದು ಬಾರಿ ಇಲ್ಲಿಗೆ ಭೇಟಿ ನೀಡಿದರೆ ಇಲ್ಲಿನ ವಾತಾವರಣ, ಕೆರೆಯ ಸೊಬಗು ನಿಮ್ಮನ್ನು ಆಕರ್ಷಿಸದೇ ಬಿಡದು

ಕಾಫಿನಾಡು ಚಂದುಗಾಗಿ ಫ್ಯಾನ್ಸ್‌ ಹುಡುಕಾಟ; ಅಷ್ಟಕ್ಕೂ ಎಲ್ಲಿದ್ದಾರೆ ಶಿವಣ್ಣ, ಪುನೀತಣ್ಣ ಫ್ಯಾನ್?

 ಕಾಫಿನಾಡಿನ ಮನೆಗಳಲ್ಲಿ ತಿಂಗಳ ಬಳಿಕ ಚಿಕನ್‌, ಮಟನ್‌ ಘಮಘಮ!