ಇದು ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಬೆಳ್ಳಾರೆಯ ಪಿ.ಜಿ.ಎಸ್.ಎನ್ ಪ್ರಸಾದ್ ಅವರ ಅಪರೂಪದ ಸಾಧನೆ. 

ತನ್ನ 16 ನೇ ವಯಸ್ಸಿನಲ್ಲಿ ಮಳೆಯ ಪ್ರಮಾಣವನ್ನು ಅಳೆಯಲು ಆರಂಭಿಸಿದ್ದ ಪ್ರಸಾದ್ ಈವರೆಗೂ ಮಳೆಯ ಲೆಕ್ಕಾಚಾರವನ್ನು ಮಾಡಿಕೊಂಡೇ ಬರುತ್ತಿದ್ದಾರೆ. 

1976 ರಿಂದ ಕಳೆದ ವರ್ಷದ ತನಕದವರೆಗೆ ಪ್ರತೀ ವರ್ಷ ದಕ್ಷಿಣಕನ್ನಡ ಜಿಲ್ಲೆಯಲ್ಲಿ ಎಷ್ಟು ಮಳೆ ಸುರಿದಿದೆ ಎನ್ನುವ ಲೆಕ್ಕಾಚಾರ ಜಿಲ್ಲಾಡಳಿತದ ಬಳಿ ಇಲ್ಲದಿದ್ದರೂ, ಇವರ ಬಳಿ ಮಾತ್ರ ಪಕ್ಕಾ ಇದೆ.

ಕಳೆದ 50 ವರ್ಷಗಳಲ್ಲಿ ಯಾವ ವರ್ಷದಲ್ಲಿ ಅತೀ ಹೆಚ್ಚು ಮಳೆ ಬಂದಿದೆ, ಅತೀ ಕಡಿಮೆ ಮಳೆ ಬಂದಿದೆ ಎನ್ನುವ ಮಾಹಿತಿ ಇವರ ಬಳಿಯಿದ್ದು, ಇದೇ ಲೆಕ್ಕಾಚಾರದಲ್ಲಿ ಮುಂದಿನ ವರ್ಷ ಎಷ್ಟು ಮಳೆ ಬೀಳಬಹುದು, ಯಾವ ಸಮಯದಲ್ಲಿ ಬೀಳಬಹುದು ಎನ್ನುವ ಲೆಕ್ಕಾಚಾರ ಮಾಡುತ್ತಾರೆ.

ಮಳೆಯ ಲೆಕ್ಕಾಚಾರ ಮಾಡುವುದಕ್ಕೆ ವಿಶೇಷ ಜ್ಞಾನ ಮತ್ತು ಶ್ರಮದ ಅವಶ್ಯಕತೆಯಿಲ್ಲ ಎನ್ನುವ ಪ್ರಸಾದ್, ಈ ಲೆಕ್ಕಾಚಾರವನ್ನು ಯಾರು ಬೇಕಾದರೂ ಮಾಡಬಹುದಾಗಿದೆ. 

ಸಮತಟ್ಟಾದ ಗಾಜಿನ ಜಾರ್ ಗೆ ಮಳೆ ನೀರು ಬೀಳುವಂತೆ ಜೋಡಿಸಿ, ಪ್ರತೀ ದಿನ ಬೆಳಗ್ಗೆ 8 ಗಂಟೆಗೆ ಜಾರ್ ನಲ್ಲಿ ಶೇಖರಣೆಯಾದ ನೀರಿನ ಮಟ್ಟವನ್ನು ಬರೆದಿಡಬೇಕಾಗುತ್ತದೆ.

ಮಳೆ ಸುರಿಯುವ ಲೆಕ್ಕಾಚಾರದಿಂದ ಜಿಲ್ಲೆಯ ಪ್ರಮುಖ ಬೆಳೆಯಾದ ಅಡಿಕೆಗೂ ಪ್ರಯೋಜನವಾಗಲಿದ್ದು, ಯಾವ ಸಮಯಕ್ಕೆ ಗಿಡಗಳಿಗೆ ಮದ್ದು ಬಿಡುವ ಅಥವಾ ಇತರೆ ಕಾರ್ಯಗಳನ್ನು ಮಾಡಬೇಕು ಎನ್ನುವ ಲೆಕ್ಕಾಚಾರವನ್ನೂ ಮಾಡಬಹುದಾಗಿದೆ.

 ಮಳೆಯ ಈ‌ ಲೆಕ್ಕಾಚಾರವನ್ನು ಎಲ್ಲಾ ಕೃಷಿಕರು ಇಟ್ಟುಕೊಳ್ಳುವ ಅಗತ್ಯವಿದ್ದು, ಈ ನಿಟ್ಟಿನಲ್ಲಿ ಮಕ್ಕಳಿಗೆ ಈ‌ ಬಗ್ಗೆ ಮಾಹಿತಿ ನೀಡುವ ಕಾರ್ಯದಲ್ಲೂ ಪ್ರಸಾದ್ ತೊಡಗಿಕೊಂಡಿದ್ದಾರೆ.

Mysuru: ಹಳೆಯ ವಿದ್ಯಾರ್ಥಿಗಳಿಂದ 20ಕ್ಕೂ ನಿವೃತ್ತ ಶಿಕ್ಷಕರಿಗೆ ಗೌರವ; ಬೆಕ್ಕೆರೆಯಲ್ಲಿ ಸ್ನೇಹ ಸಮ್ಮಿಲನ