ಚಿಕ್ಕಮಗಳೂರಿನ ಕರಸೇವಕನಾಗಿದ್ದ ವಕೀಲ ರಾಮಸ್ವಾಮಿ ಅವರು ಅಯೋಧ್ಯೆ ಹೋರಾಟದ ಬಗ್ಗೆ ಮೆಲುಕು ಹಾಕಿದ್ದಾರೆ

ಅಯೋದ್ಯೆ ರಾಮ ಮಂದಿರ ಲೋಕಾರ್ಪಣೆಗೆ ಇನ್ನೇನು ದಿನಗಣನೆ ಆರಂಭವಾಗಿದೆ

ಈ ಮಧ್ಯೆ ಅಯೋಧ್ಯೆ ಕರಸೇವೆಯಲ್ಲಿ ತೊಡಗಿಕೊಂಡವರು ಭವ್ಯ ರಾಮ ಮಂದಿರವನ್ನು ಕಣ್ತುಂಬಿಕೊಳ್ಳಲು ಕಾತರರಾಗಿದ್ದಾರೆ

ಅಂತಹವರಲ್ಲಿ ಚಿಕ್ಕಮಗಳೂರಿನ ಈ ರಾಮಸ್ವಾಮಿ ಕೂಡಾ ಒಬ್ಬರು

ರಾಮ ಮಂದಿರದೊಳಗೆ ಇನ್ನೂ 14 ದೇವಾಲಯ, ಚಿನ್ನದ ಸಿಂಹಾಸನದ ರಹಸ್ಯವೇನು?

1990ರ ದಶಕದಲ್ಲಿ ನಡೆದ ಕರಸೇವೆ ಹೇಗಿತ್ತು ಅನ್ನೋದನ್ನ ಖುದ್ದು ರಾಮಸ್ವಾಮಿ ಅವರೇ ಲೋಕಲ್‌ 18 ಜೊತೆ ಮಾತನಾಡಿದ್ದಾರೆ

ಚಿಕ್ಕಮಗಳೂರು ಮೂಲದ ರಾಮಸ್ವಾಮಿ ಅವರು ವೃತ್ತಿಯಲ್ಲಿ ವಕೀಲರಾದರೂ, ಸಂಘ ಪರಿವಾರದ ನಿಷ್ಠಾವಂತ ಕಾರ್ಯಕರ್ತರಾಗಿದ್ದರು

 1990 ರ ಸಮಯ ಇಡಿ ದೇಶವೇ ಅಯೋಧ್ಯೆಗಾಗಿ ಹೊರಟು ನಿಂತು ಸಮಯದಲ್ಲಿ ರಾಮಸ್ವಾಮಿ ಕೂಡಾ ಅವರ ಜೊತೆಗೆ ಸೇರಿಕೊಂಡಿದ್ದರು

“ಪ್ರಾಣ ಕೊಟ್ಟೆವು ಅಯೋಧ್ಯೆ ಬಿಡಲ್ಲ” ಅನ್ನೋ ಘೋಷವಾಕ್ಯವು ಎಲ್ಲೆಡೆ ಮೊಳಗುತ್ತಲೇ, ರಾಮಸ್ವಾಮಿ ಕೂಡಾ ಹೋರಾಟಕ್ಕೆ ಧುಮುಕಿದ್ದರು

 ಅಂತಹ ಸಮಯದಲ್ಲಿ ಇವ್ರು ಮೊಳಗಿಸುತ್ತಿದ್ದ ಘೋಷವಾಕ್ಯ ಬರಹಗಳು ಇಂದಿಗೂ ಅವರ ಬಳಿ ಇದೆ ಅನ್ನೋದೆ ಕುತೂಹಲ

Ayodhya Travel Plan: ಅಯೋಧ್ಯೆಗೆ ಬಂದ್ರೆ ಕೇವಲ 45 ನಿಮಿಷದಲ್ಲಿ ಕಾಶಿಗೂ ಹೋಗ್ಬನ್ನಿ! ಇಲ್ಲಿದೆ ಅವಕಾಶ