ವಾಸ್ತು ಶಾಸ್ತ್ರದಲ್ಲಿ ಅನೇಕ ನಿಯಮಗಳನ್ನು ವಿವರಿಸಲಾಗಿದೆ. ಈ ವಾಸ್ತು ಸಲಹೆಗಳ ಸಹಾಯದಿಂದ ನಮ್ಮ ಭವಿಷ್ಯವನ್ನು ಸುಧಾರಿಸಿಕೊಳ್ಳಬಹುದು
ಕುಟುಂಬಕ್ಕೆ ಹಣದ ಸಮಸ್ಯೆ ಇದ್ದರೂ ಸಹ ಇದಕ್ಕಾಗಿ ಕೆಲವು ವಾಸ್ತು ಸಲಹೆಗಳಿದೆ
ಮನೆಯಲ್ಲಿ ಇರಿಸಲಾಗಿರುವ ಎಲ್ಲಾ ವಸ್ತುಗಳು ಸಹ ಸರಿಯಾದ ದಿಕ್ಕಿನಲ್ಲಿ ಇಡಬೇಕು. ನೀವು ಯಾವುದೇ ವಾಸ್ತುವನ್ನು ತಪ್ಪು ದಿಕ್ಕಿನಲ್ಲಿ ಇರಿಸಿದರೆ,
ಅದು ಹಾನಿಯನ್ನುಂಟುಮಾಡುತ್ತದೆ. ಅದರಂತೆ ಮನೆಯ ಡಸ್ಟ್‌ಬಿನ್ ಅನ್ನು ಸರಿಯಾದ ಸ್ಥಳದಲ್ಲಿ ಇಡದಿದ್ದರೆ, ಮನೆಯ ಸದಸ್ಯರು ಹಲವಾರು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ
ಶತ್ರುಗಳ ಕಾಟದಿಂದ ಮುಕ್ತಿ ಪಡೆಯಲು ಈ ಅಪರಾಜಿತ ಶ್ಲೋಕ ಪಠಿಸಿ
ಮನೆಯಲ್ಲಿ ಕಸದ ಬುಟ್ಟಿಯನ್ನು ಮನೆಯೊಳಗೆ ಈಶಾನ್ಯ ದಿಕ್ಕಿನಲ್ಲಿ ಯಾವುದೇ ಕಾರಣಕ್ಕೂ ಇಡಬಾರದು ಎಂದು ವಾಸ್ತು ಶಾಸ್ತ್ರದಲ್ಲಿ ಹೇಳಲಾಗಿದೆ
ಈ ರೀತಿ ಮಾಡುವುದರಿಂದ ಮನೆಯ ಸದಸ್ಯರ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ
ಇದು ನಿಮ್ಮ ಜೀವನದಲ್ಲಿನ ಒತ್ತಡವನ್ನ ಹೆಚ್ಚು ಮಾಡುತ್ತದೆ. ಹಾಗೆಯೇ, ಆಗ್ನೇಯ ದಿಕ್ಕಿಗೆ ಕಸದ ಬುಟ್ಟಿಯನ್ನು ಇಟ್ಟರೆ ಸಂಪತ್ತು ಪಡೆಯಲು ತೊಂದರೆಯಾಗುತ್ತದೆ ಎಂದು ವಾಸ್ತು ಶಾಸ್ತ್ರ ಹೇಳುತ್ತದೆ
ಈ ದಿಕ್ಕಿನಲ್ಲಿ ಇಟ್ಟರೆ ಮನೆಯಲ್ಲಿ ಇಟ್ಟಿರುವ ಹಣವೂ ಖಾಲಿ ಆಗಿ ಮನೆಯ ಸಾಲದ ಹೊರೆ ಹೆಚ್ಚುತ್ತದೆ
ವಾಸ್ತು ಶಾಸ್ತ್ರದಲ್ಲಿ ಮನೆಯೊಳಗೆ ಕಸದ ಬುಟ್ಟಿ ಇಡಲು ಸರಿಯಾದ ದಿಕ್ಕಿದೆ. ಕಸದ ತೊಟ್ಟಿಯನ್ನು ಯಾವಾಗಲೂ ಮನೆಯ ನೈಋತ್ಯ ಅಥವಾ ವಾಯುವ್ಯ ದಿಕ್ಕಿನಲ್ಲಿ ಇಡಬೇಕು ಎಂದು ವಾಸ್ತು ಶಾಸ್ತ್ರದಲ್ಲಿ ಹೇಳಲಾಗಿದೆ
ನೈಋತ್ಯ ದಿಕ್ಕಿಗೆ ಡಸ್ಟ್ ಬಿನ್ ಇಡುವುದು ಒಳ್ಳೆಯ ಫಲಗಳನ್ನ ನೀಡುತ್ತದೆ
ಡಸ್ಟ್‌ಬಿನ್ ಅನ್ನು ವಾಯುವ್ಯ ದಿಕ್ಕಿನಲ್ಲಿಯೂ ಇಟ್ಟರೆ ನಿಮ್ಮ ಅನೇಕ ಲಾಭಗಳು ಸಿಗುತ್ತದೆ
ವಾಸ್ತು ಪ್ರಕಾರ ಈಶಾನ್ಯ ದಿಕ್ಕಿನಲ್ಲಿ ಇಟ್ಟಿರುವ ಡಸ್ಟ್‌ಬಿನ್ ಮನೆಯಲ್ಲಿ ಬಡತನವನ್ನು ತರುತ್ತದೆ. ನಂಬಿಕೆಗಳ ಪ್ರಕಾರ ಈಶಾನ್ಯವನ್ನು ದೇವರುಗಳ ದಿಕ್ಕು ಎಂದು ಪರಿಗಣಿಸಲಾಗುತ್ತದೆ