ಅನೇಕ ವೇಳೆ ತುಳಸಿ ಗಿಡದ ಬಗ್ಗೆ ಹೆಚ್ಚು ಕಾಳಜಿ ವಹಿಸಿದರೂ, ಸೀಸನ್ಗಳು ಬದಲಾದಂತೆ ಗಿಡ ಒಣಗಲು ಮತ್ತು ಕೊಳೆಯಲು ಪ್ರಾರಂಭವಾಗುತ್ತದೆ
ಅಂತಹ ವೇಳೆ ತುಳಸಿ ಗಿಡವನ್ನು ನಿತ್ಯಹರಿದ್ವರ್ಣವಾಗಿಡಲು ನೀವು ಕೆಲವು ಟಿಪ್ಸ್ಗಳನ್ನು ಫಾಲೋ ಮಾಡಬಹುದು
ಹಿಂದೂ ಧರ್ಮದಲ್ಲಿ ತುಳಸಿ ಗಿಡಕ್ಕೆ ಹೆಚ್ಚಿನ ಪ್ರಾಮುಖ್ಯತೆ ಇದೆ. ಭಾರತೀಯ ಆಯುರ್ವೇದದಲ್ಲಿ ತುಳಸಿಯನ್ನು ವಿಶೇಷ ಔಷಧೀಯ ಮೂಲಿಕೆ ಎಂದು ಪರಿಗಣಿಸಲಾಗಿದೆ
ಹೆಚ್ಚು ನೀರು ಹಾಕಬೇಡಿ: ತುಳಸಿ ಗಿಡಕ್ಕೆ ಪ್ರತಿದಿನ ಬೆಳಗ್ಗೆ ಅನೇಕ ಮಂದಿ ನೀರು ಹಾಕುತ್ತಾರೆ. ಇದರಿಂದ ಪಾಟ್ನಲ್ಲಿಯೇ ಹೆಚ್ಚಿನ ಪ್ರಮಾಣದ ನೀರು ಸಂಗ್ರಹವಾಗುತ್ತದೆ
ಇದರಿಂದ ತುಳಸಿ ಗಿಡದ ಬೇರುಗಳು ಕೊಳೆಯುತ್ತವೆ. ವಿಶೇಷವಾಗಿ ಚಳಿಗಾಲದಲ್ಲಿ ತೇವಾಂಶವು ಯಾವಾಗಲೂ ಇರುವುದರಿಂದ ನೀರು ಅಷ್ಟು ಬೇಗ ಒಣಗುವುದಿಲ್ಲ
ಹಾಗಾಗಿ ಮಣ್ಣಿನ ಪಾಟ್ನಲ್ಲಿ ಗಿಡ ನೆಟ್ಟು ನೀರು ಹಾಕುವುದು ಉತ್ತಮ
ತಾಜಾ ಮಣ್ಣನ್ನು ಸೇರಿಸಿ: ಕಾಲಕಾಲಕ್ಕೆ ತಾಜಾ ಮಣ್ಣನ್ನು ಮಿಶ್ರಣ ಮಾಡುವುದು ಒಳ್ಳೆಯದು
ಏಕೆಂದರೆ ಹಳೆಯ ಮಣ್ಣಿನಿಂದ ಗಿಡಗಳಿಗೆ ಸರಿಯಾದ ಪ್ರಮಾಣದ ಆಮ್ಲಜನಕವನ್ನು ಪಡೆಯಲು ಸಾಧ್ಯವಾಗುವುದಿಲ್ಲ
ಸಂಕ್ರಾತಿ ಹಬ್ಬದ ವಿಶೇಷಕ್ಕೆ ಈ ಬಾರಿ ಮನೆಯಲ್ಲಿ ಟ್ರೈ ಮಾಡಿ ಅವಲಕ್ಕಿ ಪೊಂಗಲ್
ಇದರಿಂದ ತುಳಸಿ ಗಿಡ ಒಣಗುತ್ತದೆ. ಆದ್ದರಿಂದ ತಾಜಾ ಮಣ್ಣನ್ನು ಮಿಶ್ರಣ ಮಾಡಿ. ಹೀಗೆ ಮಾಡಿದರೆ ತುಳಸಿ ಗಿಡದ ಬೇರುಗಳಿಗೆ ಆಮ್ಲಜನಕ ಸುಲಭವಾಗಿ ತಲುಪುತ್ತದೆ ಮತ್ತು ಗಿಡ ಆರೋಗ್ಯಕರವಾಗಿ ಇರುತ್ತದೆ
ಹೆಚ್ಚು ಎಲೆಗಳನ್ನು ಕೀಳಬೇಡಿ: ಬಹುತೇಕ ಮಂದಿ ತುಳಸಿ ಎಲೆಗಳನ್ನು ಹಲವು ರೀತಿಯಲ್ಲಿ ಬಳಸುತ್ತಾರೆ
ಕೆಲವರು ತುಳಸಿ ಎಲೆಗಳನ್ನು ಔಷಧೀಯವಾಗಿ ಸೇವಿಸಿದರೆ, ಮತ್ತೆ ಕೆಲವರು ಧಾರ್ಮಿಕ ಕಾರಣಗಳಿಗಾಗಿ ತುಳಸಿ ಎಲೆಗಳನ್ನು ಹೇರಳವಾಗಿ ಬಳಸುತ್ತಾರೆ
ಇದರಿಂದ ತುಳಸಿ ಗಿಡ ಒಣಗಿ ಕೊಳೆಯಲಾರಂಭಿಸುತ್ತದೆ. ಆದ್ದರಿಂದ ತುಳಸಿ ಎಲೆಗಳನ್ನು ಹೆಚ್ಚು ಕೀಳುವುದನ್ನು ತಪ್ಪಿಸಿ
ಬೆಳಗ್ಗಿನ ಈ ಅಭ್ಯಾಸಗಳು ನಿಮ್ಮ ಜೀವನದ ಗುಣಮಟ್ಟವನ್ನೇ ಬದಲಾಯಿಸುತ್ತವೆ!