ಸಾಕಷ್ಟು ಮಂದಿ ಗಡ್ಡೆ ಕೋಸು ತಿನ್ನಲು ಹೆಚ್ಚಾಗಿ ಇಷ್ಟಪಡುತ್ತಾರೆ. ಆದರೆ ಕೆಲ ಮಂದಿಗೆ ಗಡ್ಡೆ ಕೋಸು ಇಷ್ಟವಾಗುವುದಿಲ್ಲ

ವಾಸ್ತವವಾಗಿ ಹೇಳುವುದಾದರೆ ಈ ತರಕಾರಿಯಲ್ಲಿ ನಾನಾ ಆರೋಗ್ಯ ಲಾಭಗಳಿದೆ

ಅದರಲ್ಲಿಯೂ ಚಳಿಗಾಲದಲ್ಲಿ ಬರುವ ವಿವಿಧ ರೋಗಗಳಿಂದ ನಮ್ಮನ್ನು ರಕ್ಷಿಸುತ್ತದೆ

ಕೆಲವು ತರಕಾರಿಗಳು ಚಳಿಗಾಲದಲ್ಲಿ ವಿಭಿನ್ನ ಆರೋಗ್ಯ ಪ್ರಯೋಜನಗಳನ್ನು ಹೊಂದಿವೆ

ನಿಮಗೆ ಮಕ್ಕಳಾಗ್ತಿಲ್ವಾ? ಡೋಂಟ್​ವರಿ ಈ ತರಕಾರಿ ತಿನ್ನಿ ಸಾಕು!

ಅವುಗಳಲ್ಲಿ ಗಡ್ಡೆ ಕೋಸು ಕೂಡ ಒಂದು. ಪೌಷ್ಟಿಕತಜ್ಞರು ಎಲ್ಲಾ ಸೀಸನ್ನಲ್ಲಿಯೂ ಹಣ್ಣುಗಳು ಮತ್ತು ತರಕಾರಿಗಳನ್ನು ತಿನ್ನುವುದಕ್ಕೆ ಶಿಫಾರಸ್ಸು ಮಾಡುತ್ತಾರೆ

ಆದರೆ ಚಳಿಗಾಲದಲ್ಲಿ ಹೆಚ್ಚಾಗಿ ಗಡ್ಡೆಕೋಸು ತಿನ್ನುವಂತೆ ಹೇಳುತ್ತಾರೆ

ಸಹಜವಾಗಿ ಪಲ್ಯ, ಗೊಜ್ಜು, ಸಾಂಬಾರ್, ಸೂಪ್ಗಳು ಮತ್ತು ಸ್ಟಿರ್-ಫ್ರೈಸ್ನಲ್ಲಿ ನೀವು ಗಡ್ಡೆ ಕೋಸನ್ನು ತಿಂದಿರಬಹುದು

ಅನೇಕ ಮಂದಿ ಗಡ್ಡೆಕೋಸಿನ ಉಪ್ಪಿನಕಾಯಿಯನ್ನು ಕೂಡ ತಿಂದಿರುತ್ತಾರೆ. ಅಷ್ಟಕ್ಕೂ ಗಡ್ಡೆಕೋಸು ಆರೋಗ್ಯಕ್ಕೆ ಹೇಗೆ ಒಳ್ಳೆಯದು ಎಂದು ತಿಳಿಯೋಣ ಬನ್ನಿ

ಒಡೆದ ಹಿಮ್ಮಡಿ ಸರಿಪಡಿಸಲು ಅಡುಗೆ ಮನೆಯಲ್ಲಿರುವ ಈ ಮಸಾಲೆಗಳೇ ಸಾಕು!

ಗಡ್ಡೆಕೋಸಿನಲ್ಲಿ ವಿಟಮಿನ್ ಸಿ ಮತ್ತು ಕೆ ಸಮೃದ್ಧವಾಗಿದೆ. ಇದರಲ್ಲಿ ವಿಟಮಿನ್ ಸಿ ಇರುವುದರಿಂದ ನಿಮ್ಮ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ ಉತ್ತಮ ರಕ್ತವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ

ಅದರೊಂದಿಗೆ, ವೋಲ್ಕಾಪಿ ಉತ್ತಮ ಮೂಳೆಗಳನ್ನು ಪಡೆಯಲು ಸಹಾಯಕವಾಗಿದೆ

ಗಡ್ಡೆಕೋಸು ಚಯಾಪಚಯ ದರವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ

ಗಡ್ಡೆಕೋಸು ಕಡಿಮೆ ಕ್ಯಾಲೋರಿ ಆಹಾರವಾಗಿದೆ. ಇದನ್ನು ತಿನ್ನುವುದರಿಂದ ನಿಮ್ಮ ಹೊಟ್ಟೆಯು ದೀರ್ಘಕಾಲದವರೆಗೆ ತುಂಬಿರುತ್ತದೆ

ಹೆಚ್ಚಿನ ಫೈಬರ್ ಅಂಶವಿರುವ ಗಡ್ಡೆಕೋಸು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ

ಜಪಾನೀಯರು ಅನುಸರಿಸುವ ಈ ಥೆರಪಿ, ತೂಕ ಇಳಿಸಲು ಬೆಸ್ಟ್​ ಟಿಪ್ಸ್​