ದೇಶಕ್ಕೆ ದೇಶವೇ ಹೆಮ್ಮೆ ಪಟ್ಟ ಕಾಂತಾರ ಚಿತ್ರದ ನಿರ್ದೇಶಕ, ನಟ ರಿಷಬ್ ಶೆಟ್ಟಿ ತಾವು ಮುಂದಿನ ಜನ್ಮದಲ್ಲಿ ಎಲ್ಲಿ ಹುಟ್ಟಬೇಕು

ಎಂಬ ಆಸೆಯನ್ನು ಬಿಚ್ಚಿಟ್ಟಿದ್ದಾರೆ

ದೇಶಕ್ಕೆ ದೇಶವೇ ಹೆಮ್ಮೆ ಪಟ್ಟ ಕಾಂತಾರ ಚಿತ್ರದ ನಿರ್ದೇಶಕ, ನಟ ರಿಷಬ್ ಶೆಟ್ಟಿ ತಾವು ಮುಂದಿನ ಜನ್ಮದಲ್ಲಿ ಎಲ್ಲಿ ಹುಟ್ಟಬೇಕು

ಏನು ಮಾಡಬೇಕು ಎಂಬ ಆಸೆಯನ್ನು ಬಿಚ್ಚಿಟ್ಟಿದ್ದಾರೆ

ರಿಷಬ್ ಶೆಟ್ಟಿ ಇಂದು ಉಡುಪಿಯಲ್ಲಿ ಪಾಣರ ನಲಿಕೆ ಸಮುದಾಯದ ಸಮಾವೇಶದಲ್ಲಿ ಭಾಗಿಯಾಗಿದ್ದರು. ಉಡುಪಿ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಕಾರ್ಯಕ್ರಮ ನಡೆದಿದೆ

ಪ್ರಥಮ ಬಾರಿಗೆ ನಡೆಯುತ್ತಿರುವ ಸಮ್ಮೇಳನದಲ್ಲಿ ರಿಷಬ್ ಶೆಟ್ಟಿ ಭಾಗಿಯಾಗಿದ್ದಾರೆ. ಕಾರ್ಯಕ್ರಮದಲ್ಲಿ ಪಾಣಾರ ನಲಿಕೆ ಸಮುದಾಯದ ಹಿರಿಯ ನರ್ತಕರಿಗೆ ಸನ್ಮಾನ ಮಾಡಲಾಯ್ತು

ಕಾರ್ಯಕ್ರಮದಲ್ಲಿ ಮಾತನಾಡಿದ ರಿಷಬ್ ಶೆಟ್ಟಿ, ಅಮೆರಿಕಾದ ಮ್ಯೂಸಿಯಂನಲ್ಲಿ ಪಂಜುರ್ಲಿಯ ಮೊಗ ಇಟ್ಟಿದ್ದಾರೆ. ಇದು ನಮ್ಮ ನೆಲದ ದೈವ ದೇವರ ಶಕ್ತಿ ಎಂದಿದ್ದಾರೆ

ಪಾಣಾರನಾಗಿ ದೈವದ ಚಾಕರಿ ಮಾಡುವಂತಾಗಲಿ. ಪಂಜುರ್ಲಿ, ಗುಳಿಗ- ಅಣ್ಣಪ್ಪ ಸ್ವಾಮಿಯ ಸೇವೆ ಮಾಡುವಂತಾಗಲಿ ಎಂದು ಆಸೆ ಪಡುತ್ತೇನೆ ಎಂದು ರಿಷಬ್ ಶೆಟ್ಟಿ ಹೇಳಿದ್ದಾರೆ

ನಲಿಕೆ ಸಮುದಾಯದ ಓದುವ ಮಕ್ಕಳಿಗೆ ಟ್ರಸ್ಟ್ ನಿಂದ ಸಹಾಯ ಮಾಡುತ್ತೇವೆ. ಪಾಣರ ಸಮುದಾಯದ ಮಕ್ಕಳಲ್ಲಿ ಶಿಕ್ಷಣ ಜೊತೆ ಆಚಾರ ವಿಚಾರ ಮುಂದುವರೆಸಲಿ. ಸಮುದಾಯಕ್ಕೆ ಭವನಕ್ಕೆ ಶಕ್ತಿಮೀರಿ ಸರಕಾರಕ್ಕೆ ಮನವರಿಕೆ ಮಾಡುತ್ತೇನೆ ಎಂದಿದ್ದಾರೆ

ಮುಖ್ಯಮಂತ್ರಿ ಉಪ ಮುಖ್ಯಮಂತ್ರಿ ಮತ್ತು ಸಚಿವರ ಜೊತೆ ಶಕ್ತಿಮೀರಿ ಒತ್ತಾಯ ಮಾಡುತ್ತೇನೆ ಎಂದು ಉಡುಪಿ ರಾಜಾಂಗಣದಲ್ಲಿ ನಟ ರಿಷಬ್ ಶೆಟ್ಟಿ ಹೇಳಿದ್ದಾರೆ