ಹಬ್ಬದ ಪೂಜೆಯ ಮುಹೂರ್ತ, ವಿಧಿ-ವಿಧಾನಗಳು ಇಲ್ಲಿದೆ

ಯುಗಾದಿಯನ್ನ ಭಾರತೀಯ ನವ ವರ್ಷ ಎಂದೂ ಕರೆಯಲಾಗುತ್ತದೆ.

ಈ ದಿನ ಯಾವ ರೀತಿ ಪೂಜೆ ಮಾಡಬೇಕು ಹಾಗು ಪೂಜೆಯ ಸಮಯವೇನು ಎಂಬುದು ಇಲ್ಲಿದೆ.

ಯುಗಾದಿಯನ್ನು ಆಂಧ್ರಪ್ರದೇಶ ಮತ್ತು ಕರ್ನಾಟಕದ ಜನರು ವರ್ಷದ ಮೊದಲ ದಿನವಾಗಿ ಆಚರಿಸುತ್ತಾರೆ.

ದೃಕ್ ಪಂಚಾಂಗದ ಪ್ರಕಾರ, ಯುಗಾದಿಯನ್ನು ಈ ವರ್ಷ ಏಪ್ರಿಲ್ 9 ರಂದು ಆಚರಿಸಲಾಗುತ್ತದೆ.

ಏಪ್ರಿಲ್ 8, 2024 ರಂದು ರಾತ್ರಿ 11:50 ಕ್ಕೆ ಪ್ರಾರಂಭವಾಗಿದ್ದು, ಏಪ್ರಿಲ್ 9, 2024 ರಂದು ರಾತ್ರಿ 8:30 ಕ್ಕೆ ಮುಗಿಯುತ್ತದೆ.

ಯುಗಾದಿಯನ್ನು ಸಂವತ್ಸರದಿ ಎಂದೂ ಸಹ ಕರೆಯಲಾಗುತ್ತದೆ. ಅಂದರೆ ಹೊಸ ವರ್ಷದ ಆರಂಭ ಎಂದರ್ಥ.

ಯುಗಾದಿಯು ಸಂಪತ್ತು, ಅಭಿವೃದ್ಧಿ, ಹೊಸ ಆರಂಭಗಳು ಮತ್ತು ಕೆಟ್ಟದ್ದರ ಮೇಲೆ ಒಳ್ಳೆಯದ ವಿಜಯವನ್ನು ಪ್ರತಿನಿಧಿಸುತ್ತದೆ.

ಮುಖ್ಯವಾಗಿ ಎಣ್ಣೆ ಸ್ನಾನ ಮಾಡಿ ಬೇವಿನ ಎಲೆಗಳನ್ನು ಸೇವನೆ ಮಾಡುವುದು ಬಹಳ ಮುಖ್ಯವಾಗುತ್ತದೆ.

ಹಿಂದೂಗಳು ಯುಗಾದಿ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸುತ್ತಾರೆ.