ಈ ಬಾರಿಯ ಬಿಸಿಲ ಬೇಗೆ ಪಶ್ಚಿಮ ಘಟ್ಟದ ತಪ್ಪಲಿನಲ್ಲಿರುವ ವನ್ಯಜೀವಿಗಳನ್ನೂ ಬಿಟ್ಟಿಲ್ಲ.
ನೀರಿಲ್ಲದೆ ಹಾಹಾಕಾರ ಎದುರಿಸುವ ಸ್ಥಿತಿ ಅವುಗಳಿಗೂ ಎದುರಾಗಿದೆ
ಇಂತಹ ಪರಿಸ್ಥಿತಿಯಲ್ಲಿ ಉಡುಪಿಯ ಕುಂದಾಪುರ ತಾಲೂಕಿನ ಸಿದ್ದಾಪುರ ವನ್ಯಜೀವಿ ವಿಭಾಗದ ಅಧಿಕಾರಿಗಳು ಕಾಡುಪ್ರಾಣಿಗಳ ದಾಹ ನೀಗಿಸಲು ಇಂತಹದ್ದೊಂದು ವಿಶಿಷ್ಟ ಯೋಜನೆ ಕೈಗೆತ್ತಿಕೊಂಡಿದ್ದಾರೆ
ಹೌದು, ಚಿರತೆ, ಕಾಡುಕೋಣ, ಜಿಂಕೆ, ಕೋತಿ ಹೀಗೆ ಹಲವು ಪ್ರಾಣಿಗಳು ತಮ್ಮ ದಾಹವನ್ನ ತಣಿಸಿಕೊಳ್ಳುತ್ತಿರುವುದು ಯಾವುದೋ ರಾಷ್ಟ್ರೀಯ ಉದ್ಯಾನವನದಲ್ಲಲ್ಲ
Summer Tips: ಬೇಸಿಗೆಯಲ್ಲಿ ಬರೇ ಹಣ್ಣಿನ ಜ್ಯೂಸ್ ಮಾತ್ರ ಅಲ್ಲ, ಈ ತರಕಾರಿಗಳನ್ನೂ ಟ್ರೈ ಮಾಡಿ!
ಬದಲಿಗೆ, ಸಿದ್ದಾಪುರ ವನ್ಯಜೀವಿ ವಿಭಾಗದ ವ್ಯಾಪ್ತಿಯಲ್ಲಿ ಬರುವ ಕಮಲಶಿಲೆಯ ಕಾಡಿನಲ್ಲಿ
ಈ ಬಾರಿಯ ಬೇಸಿಗೆಯಿಂದ ಹಳ್ಳ, ಕೊಳ್ಳಗಳು ಬರಿದಾಗುತ್ತಿರೋದರಿಂದ ವನ್ಯಜೀವಿಗಳಿಗೂ ನೀರಿನ ಸಮಸ್ಯೆ ಎದುರಾಗಿದೆ
ಇದನ್ನ ಮನಗಂಡ ಸಿದ್ದಾಪುರ ವನ್ಯಜೀವಿ ವಿಭಾಗದ ಸಂತೋಷ್ ಪವಾರ್ ಮತ್ತು ತಂಡ ಆಯಕಟ್ಟಿನ ಜಾಗಗಳಲ್ಲಿ ನೀರಿನ ತೊಟ್ಟಿಗಳನ್ನು ನಿರ್ಮಿಸಿ ಅದಕ್ಕೆ ನೀರು ಇಡುವ ಯೋಜನೆಯನ್ನ ಕೈಗೆತ್ತಿಕೊಂಡಿದ್ದಾರೆ
ಸುಮಾರು 15 ಕಡೆಗಳಲ್ಲಿ ಇಂತಹ ನೀರಿನ ಟ್ಯಾಂಕ್ ಗಳನ್ನು ನಿರ್ಮಾಣ ಮಾಡಲಾಗಿದೆ
ಎರಡು ದಿನಗಳಿಗೊಮ್ಮೆ ಟ್ಯಾಂಕರ್ ಮೂಲಕ ನೀರು ತುಂಬಿಸುವ ಕಾರ್ಯವು ನಡೆಯುತ್ತಿದೆ
ಈ ವ್ಯಾಪ್ತಿಯಲ್ಲಿ ಚಿರತೆ,ಕಾಡುಕೋಣ, ಕಾಡು ಹಂದಿ, ಕಡವೆ, ಜಿಂಕೆ, ಮುಳ್ಳುಹಂದಿ, ನವಿಲು, ಕೋತಿ ಮುಂತಾದ ಪ್ರಾಣಿ ಪಕ್ಷಿಗಳು ಕೂಡ ವನ್ಯಜೀವಿ ವಿಭಾಗ ನಿರ್ಮಿಸಿದ ತೊಟ್ಟಿಯ ನೀರನ್ನೆ ಈ ಬಾರಿ ಆಶ್ರಯಿಸಿದೆ
ಇಲಾಖೆಯು ಈ ತೊಟ್ಟಿಗಳನ್ನು ಯಾವ ಯಾವ ಪ್ರಾಣಿಗಳು ನೀರಿಗಾಗಿ ಬಳಸುತ್ತವೆ ಎನ್ನುವುದನ್ನು ಕೂಡ ಟ್ರ್ಯಾಕ್ ಕ್ಯಾಮೆರಾದ ಮೂಲಕ ಸೆರೆ ಹಿಡಿಯುತ್ತಿವೆ
ಇದರ ಆಧಾರದ ಮೇಲೆ ಇನ್ನಷ್ಟು ಹೆಚ್ಚಿನ ತೊಟ್ಟಿಗಳನ್ನು ನಿರ್ಮಾಣ ಮಾಡುವ ಯೋಜನೆ ಇಲಾಖೆಯದ್ದಾಗಿದೆ