ಏನಿದು ವಾಯಣ ಪೂಜೆ!?

ವಾಯಣ ಎಂದರೆ ತೆಂಗಿನಕಾಯಿ ಎಂದು ಅರ್ಥ. ಐದು ತೆಂಗಿನ ಕಾಯಿಯನ್ನು ತವರಿನಿಂದ, ಇನ್ನೈದನ್ನು ಗಂಡನ ಮನೆಯಿಂದ ತರಲಾಗುತ್ತದೆ

ಅದಾಗಿ ಒಂದು ಕಾಯಿಯನ್ನು ತನ್ನ ಪ್ರತೀಕವಾಗಿ ಇರಿಸುತ್ತಾಳೆ ಗೃಹಿಣಿ

ಮೂರು ತೆಂಗಿನಕಾಯಿ ಜುಟ್ಟನ್ನು ಕಿತ್ತು ಅರಿಶಿನ ಸವರಿ ಇರಿಸಲಾಗುತ್ತದೆ

ಗಾತ್ರದ ಆಧಾರದ ಮೇಲೆ ಪರಮೇಶ್ವರ, ಪಾರ್ವತಿ ಹಾಗೂ ಗಣಪತಿ ಎಂದು ಅವುಗಳನ್ನು ಅಲಂಕರಿಸಿ ಅವುಗಳಿಗೆ ಷೋಡಶೋಪಚಾರ ಮಾಡುತ್ತಾರೆ

ಮೂರು ತೆಂಗಿನಕಾಯಿಯನ್ನೇ ಶಿವನ ಪರಿವಾರ ಎಂದು ತಿಳಿಯಲಾಗುತ್ತದೆ

ನಂತರ ಗೌರಿ ಅಷ್ಟೋತ್ತರದ ಮೂಲಕ "ದೋರ್" ಎಂಬ ತಾಳಿ ಹೋಲುವ ರಚನೆಗೆ ಪೂಜೆ ಮಾಡಿ, ತಮ್ಮ ಗಂಡಂದಿರ ಕೈಯಿಂದ ಕಟ್ಟಿಸಿಕೊಳ್ಳುತ್ತಾರೆ

ಹಾಗೆ ಕಟ್ಟಿಸಿಕೊಂಡ ನಂತರ ಹಿಂದಿನ ವರ್ಷದ ದೋರ್ ಅನ್ನು ವಿಸರ್ಜಿಸಲಾಗುತ್ತದೆ. ಇದಿಷ್ಟು ವಾಯಣ ಪೂಜೆಯ ವಿಧಾನ

ಅಂದು ಯಾವುದೇ ಅಡುಗೆಗೆ ಉಪ್ಪು ಹಾಕುವುದಿಲ್ಲ

ವಿಶೇಷವಾಗಿ ಅವಲಕ್ಕಿ ಪಾಯಸ, ಅರಿಶಿನ ಎಲೆ ಕಡುಬು, ತೊಂಡೆ-ಬೆಂಡೆ ಸೌತೆಯ ಪಲ್ಯ, ಅನ್ನದ ಗಂಜಿ ಇವಿಷ್ಟನ್ನೂ ನೈವೇದ್ಯ ಮಾಡಿ ಅರ್ಪಿಸಲಾಗುತ್ತದೆ