ಗೋಕರ್ಣದ ಸಮುದ್ರ ಕಿನಾರೆಯಲ್ಲಿ ಶಿವಗಂಗೆಯ ಕಲ್ಯಾಣ ಸಂಭ್ರಮ!
ಗೋಕರ್ಣದಲ್ಲಿ ಮಹಾಬಲೇಶ್ವರ ದೇವರಿಗೂ, ಗಂಗಾವಳಿಯ ಗಂಗಾಮಾತೆಗೂ ವಿವಾಹ ಕಾರ್ಯ ನೆರವೇರಿತು.
ದೀಪಾವಳಿಯ ನರಕ ಚತುರ್ದಶಿಯ ಗೋಧೂಳಿ
ಮುಹೂರ್ತದಲ್ಲಿ
ಶಿವಗಂಗಾ ವಿವಾಹ ಮಹೋತ್ಸವು ನಡೆಯಿತು.
ಭಕ್ತರ ಸಮ್ಮುಖದಲ್ಲಿ ದೇವರ ನಿಶ್ಚಿತಾರ್ಥ ತಾಂಬೂಲೋತ್ಸವವನ್ನು ನಡೆಸಲಾಗಿತ್ತು.
ಗಂಗಾವಳಿ ಮತ್ತು ಗೋಕರ್ಣದ ಮಧ್ಯೆ ಕಪಿಲಾ ನದಿ ಸಮುದ್ರ ಸೇರುವ ಸ್ಥಳದಲ್ಲಿ ವಿವಾಹ ಕಾರ್ಯ ನೆರವೇರಿತು.
ಸಮುದ್ರ ಕಿನಾರೆಯಲ್ಲಿ ಮಾವಿನ ತೋರಣದಿಂದ ಮದುವೆಯ ಮಂಟಪ ನಿರ್ಮಿಸಲಾಗಿತ್ತು.
ಕಡಲಿನ ಅಬ್ಬರ, ವಾದ್ಯಘೋಷ, ವೇದಘೋಷ, ಜಾನಪದ ಹಾಡುಗಳು ಉತ್ಸವಕ್ಕೆ ಮೆರುಗನ್ನು ನೀಡಿದವು.
ದಾರಿಯುದ್ದಕ್ಕೂ ಭಕ್ತರು ಹಾಕಿದ ತಳಿರು, ತೋರಣ ಆಕರ್ಷಕವಾಗಿ ಕಂಡುಬಂತು.
ಭಕ್ತ ಜನರು ತೋರಣಕ್ಕೆ ಕಟ್ಟಿದ ಮಾವಿನ ಎಲೆಯನ್ನು ಪ್ರಸಾದದ ರೂಪದಲ್ಲಿ ಸ್ವೀಕರಿಸಿ ಕೃತಾರ್ಥರಾದರು.
ಸಹಸ್ರಾರು ಜನರು ದೇವರ ಮದುವೆಗೆ ಸಾಕ್ಷಿಯಾದರು.