ಒಂದೇ ನಿಮಿಷದಲ್ಲಿ ಮುಗಿದ ವಜ್ರಮುಷ್ಟಿ ಕಾಳಗ,
ಮೈಸೂರು ದಸರಾದಲ್ಲಿ ಎದೆ ಝಲ್ ಎನ್ನಿಸಿದ ಜಟ್ಟಿ ಕಾಳಗ
ಅರಮನೆ ಶ್ವೇತ ವರಹ ದೇವಸ್ಥಾನದಲ್ಲಿ ಈ ವಜ್ರಮುಷ್ಠಿ ಕಾಳಗ ನಡೆಯಿತು.
ಜಟ್ಟಿಗಳು ಆನೆ ದಂತದಿಂದ ಮಾಡಿದ ವಜ್ರಮುಷ್ಟಿ ಎಂಬ ಆಯುಧವನ್ನು ಕೈಗೆ ಧರಿಸಿ ಪರಸ್ಪರ ಕಾದಾಟ ನಡೆಸುತ್ತಾರೆ.
ಎದುರಾಳಿ ಜಟ್ಟಿಯ ಹಣೆಯಲ್ಲಿ ರಕ್ತ ಚಿಮ್ಮಿದರೆ ಅಲ್ಲಿಗೆ ಸ್ಪರ್ಧೆ ಮುಗಿದಂತೆ.
ಮೈಸೂರು ದಸರಾದಲ್ಲಿ ನಿಮ್ಮ ಜಿಲ್ಲೆಯ ಸ್ಥಬ್ಧಚಿತ್ರ
ಇಲ್ಲಿದೆ ನೋಡಿ!
ಹೋರಾಟದಲ್ಲಿ ಚನ್ನಪಟ್ಟಣ ಹಾಗೂ ಬೆಂಗಳೂರಿನ ಜಟ್ಟಿಗಳಿಗೆ ವಿಜಯಲಕ್ಷ್ಮಿ ಒಲಿದಳು.
ವಜ್ರಮುಷ್ಟಿ ಕಾಳಗ ಪರಂಪರಾಗತವಾಗಿ ಮೈಸೂರು ದಸರಾದಲ್ಲಿ ನಡೆಯುವ ರೋಚಕ ಕಾದಾಟ.
ದಸರಾ ಅಂಬಾರಿಯ ಅರಮನೆಯಿಂದ ಹೊರಡುವ ಮೊದಲು ಈ ಹಣಾಹಣಿ ನಡೆಯುತ್ತದೆ.
ಚನ್ನಪಟ್ಟಣದ ಪ್ರವೀಣ ಜಟ್ಟಿ13 ಸೆಕೆಂಡ್ನಲ್ಲಿ ಎದುರಾಳಿಯ ರಕ್ತ ಚಿಮ್ಮಿಸಿದರು.
ಜಟ್ಟಿ ಕಾಳಗವನ್ನು ನೇರವಾಗಿ ನೋಡಿ ಕಣ್ತುಂಬಿಕೊಂಡ ವೀಕ್ಷಕರು