ಥೇಟ್‌ ತನ್ನಂತಿರೋ ಪ್ರತಿಮೆ ಕಂಡು ಆಶ್ಚರ್ಯಪಟ್ಟ ಧರ್ಮಸ್ಥಳದ ಧರ್ಮಾಧಿಕಾರಿ!

ವೀರೇಂದ್ರ ಹೆಗ್ಗಡೆ ಅವರ ಮೇಣದ ಪ್ರತಿಮೆ ಭಾರೀ ಗಮನ ಸೆಳೆಯುತ್ತಿದೆ.

ಡಾ. ಡಿ.ವೀರೇಂದ್ರ ಹೆಗ್ಗಡೆಯವರಿಗೆ ಬೆಂಗಳೂರಿನ ಭಕ್ತರೋರ್ವರು ವಿಶೇಷ ಉಡುಗೊರೆಯಾಗಿ ನೀಡಿದ್ದಾರೆ.

ಥೇಟ್ ವೀರೇಂದ್ರ ಹೆಗ್ಗಡೆಯವರನ್ನೇ ಹೋಲುವ ಮೇಣದ ಪ್ರತಿಮೆಯನ್ನು ಉಡುಗೊರೆಯಾಗಿ ನೀಡಲಾಗಿದೆ.

ಪುಟ್ಟಪರ್ತಿಗೆ ವೀರೇಂದ್ರ ಹೆಗ್ಗಡೆ ಯವರ ಕುಟುಂಬ ಪ್ರವಾಸಕ್ಕೆ ಹೋದಾಗ ಈ ಪ್ರತಿಮೆಯನ್ನು ನೀಡಲಾಗಿದೆ.

ಶ್ವೇತ ವಸ್ತ್ರಧಾರಿಯಾಗಿ ನಿಂತಿರುವ ಹೆಗ್ಗಡೆಯವರ ಮೇಣದ ಪ್ರತಿಮೆಯನ್ನು ರಚಿಸಲಾಗಿದೆ.

ಪುಟ್ಟಪರ್ತಿಯ ನಿವಾಸದಲ್ಲಿ ವೀರೇಂದ್ರ ಹೆಗ್ಗಡೆಯವರು ಬರುವ ಮುಂಚೆಯೇ ಪ್ರತಿಮೆಯನ್ನು ಇರಿಸಲಾಗಿತ್ತು.

ಹೆಗ್ಗಡೆಯಯವರು ಬಂದಾಗ ಕುಟುಂಬದ ಸದಸ್ಯರ ಸಮ್ಮುಖ ದಲ್ಲೇ ಪ್ರತಿಮೆಯ ಆನಾವರಣ ಮಾಡಲಾಗಿದೆ‌‌.

ಪ್ರತಿಮೆ ಕಂಡ ವೀರೇಂದ್ರ ಹೆಗ್ಗಡೆಯವರ ಧರ್ಮಪತ್ನಿ ಹೇಮಾವತಿ ಪ್ರತಿಮೆ ನೋಡಿ ಖುಷಿ ಪಟ್ಟಿದ್ದಾರೆ.

ಈ ಮೇಣದ ಪ್ರತಿಮೆಯನ್ನು ಬೆಂಗಳೂರು ಮೂಲದ ಕಲಾವಿದರು ರಚಿಸಿದ್ದರು.

ಪ್ರತಿಮೆ ಮಾಡೋಕೆ ಮುನ್ನ ನಿಂತಿರುವ ಶೈಲಿಯಲ್ಲಿ ಹೆಗ್ಗಡೆಯರ ಫೋಟೋ ಶೂಟ್ ಮಾಡಲಾಗಿತ್ತು.