ದಿನವೂ ರೈಸ್ ಬಾತ್ ತಿಂದು ಬೇಜಾರಾಗಿದ್ಯಾ? ಹಾಗಿದ್ದರೆ ಸುಲಭವಾಗಿ ಮಾಡಬಹುದಾದ ಈ ಸೂಪರ್ ಆಗಿರೋ ವೆಜ್ ಆಮ್ಲೆಟ್ ಟ್ರೈ ಮಾಡಿ

ನಿಮಗೆ ರೈಸ್ ಬಾತ್ ತಿಂದು ಬೇಜಾರಾಗಿದ್ರೆ ಈ ಒಂದು ಹೊಸ ರೆಸಿಪಿಯನ್ನು ಖಂಡಿತಾ ಟ್ರೈ ಮಾಡಬೇಕು

ಬಿಸಿ ಬಿಸಿಯಾದ ವೆಜ್ ಆಮ್ಲೆಟ್ ಇದ್ದರೆ ನಿಮ್ಮ ಬ್ರೇಕ್​ಫಾಸ್ಟ್ ರುಚಿಕರವಾಗಿರುವುದಂತೂ ಗ್ಯಾರಂಟಿ

ಇದು ಸ್ವಲ್ಪ ಸ್ಪೈಸಿಯಾಗಿ, ಕ್ರಿಸ್ಪಿಯಾಗಿರುವುದರಿಂದ ಮಕ್ಕಳಿಂದ ಹಿಡಿದು ದೊಡ್ಡವರ ತನಕ ಎಲ್ಲರಿಗೂ ಇಷ್ಟವಾಗುತ್ತದೆ

ದಿನವೂ ರೈಸ್ ಬಾತ್ ತಿಂದು ಬೇಜಾರಾಗಿದ್ಯಾ? ಹಾಗಿದ್ದರೆ ಸುಲಭವಾಗಿ ಮಾಡಬಹುದಾದ ಈ ಸೂಪರ್ ಆಗಿರೋ ವೆಜ್ ಆಮ್ಲೆಟ್ ಟ್ರೈ ಮಾಡಿ

ಈ ವೆಜ್ ಆಮ್ಲೆಟ್ ಮಾಡಲು ಹೆಚ್ಚಿನ ವಸ್ತುಗಳೂ ಬೇಕಾಗಿಲ್ಲ. ಸುಲಭವಾಗಿ ಮಾಡಬಹುದು

ಬೇಕಾದ ವಸ್ತುಗಳು: ಒಂದು ಕಪ್ ಕಡ್ಲೆ ಹಿಟ್ಟು ಒಂದು ಕಪ್, 1 ಈರುಳ್ಳಿ(ಸಣ್ಣಗೆ ಹೆಚ್ಚಿದ್ದು), 1 ಟೊಮೆಟೋ (ಸಣ್ಣಕ್ಕೆ ಹೆಚ್ಚಿದ್ದು), 1 ಟೊಮೆಟೋ (ರೌಂಡ್ ಆಗಿ ಸ್ಲೈಸ್ ಮಾಡಿದ್ದು), 1 ಹಸಿಮೆಣಸು(ಸಣ್ಣಗೆ ಹೆಚ್ಚಿದ್ದು), 1ವರೆ ಸ್ಪೂನ್ ಮೆಣಸಿನ ಹುಡಿ, ಅರ್ಧ ಚಮಚ ಸೋಂಪು, 1 ಚಮಚ ಎಣ್ಣೆ, ತುಪ್ಪ, ಉಪ್ಪು ರುಚಿಗೆ ತಕ್ಕಷ್ಟು

ಸ್ಲೈಸ್ ಮಾಡಿದ ಟೊಮೆಟೋ ಒಂದನ್ನು ಬಿಟ್ಟು ಈ ಎಲ್ಲವನ್ನೂ ಒಂದು ಪಾತ್ರೆಯಲ್ಲಿ ಹಾಕಿ ಮಿಕ್ಸ್ ಮಾಡಿ

ಒಂದು ಕಪ್ ನೀರು ಸೇರಿಸಿ ಮಿಕ್ಸ್ ಮಾಡಿ ದಪ್ಪನೆ ಹಿಟ್ಟು ಮಾಡಿಕೊಳ್ಳಿ. ಅದನ್ನು ಮುಚ್ಚಿ 10 ನಿಮಿಷ ಬಿಡಿ

ದಿನವೂ ರೈಸ್ ಬಾತ್ ತಿಂದು ಬೇಜಾರಾಗಿದ್ಯಾ? ಹಾಗಿದ್ದರೆ ಸುಲಭವಾಗಿ ಮಾಡಬಹುದಾದ ಈ ಸೂಪರ್ ಆಗಿರೋ ವೆಜ್ ಆಮ್ಲೆಟ್ ಟ್ರೈ ಮಾಡಿ

ತವಾಗೆ ಎಣ್ಣೆ ಅಥವಾ ತುಪ್ಪ ಸವರಿ ನಂತರ ಹಿಟ್ಟನ್ನು ದೋಸೆಯಂತೆ ಎರೆಯಿರಿ

ಅದರ ಮೇಲೆ 2-3 ಸ್ಲೈಸ್ ಮಾಡಿದ ಟೊಮೆಟೋ ಹಾಕಿರಿ. ಮತ್ತಷ್ಟು ತುಪ್ಪ ಸವರಿ 5 ನಿಮಿಷ ಲೋ ಫ್ಲೇಮ್​ನಲ್ಲಿ ಮುಚ್ಚಿಟ್ಟು ಬೇಯಿಸಿ

ನಂತರ ತಿರುಗಿಸಿ ಹಾಕಿ. ಮತ್ತೊಂದು ರೌಂಡ್ ತುಪ್ಪ ಹಾಕಿಕೊಳ್ಳಿ. ಈಗ ಗ್ಯಾಸ್ ಉರಿಯನ್ನು ಮೀಡಿಯಂನಲ್ಲಿಡಿ

ಮತ್ತೆ 5 ನಿಮಿಷ ಬೇಯಿಸಿಕೊಳ್ಳಿ

ದಿನವೂ ರೈಸ್ ಬಾತ್ ತಿಂದು ಬೇಜಾರಾಗಿದ್ಯಾ? ಹಾಗಿದ್ದರೆ ಸುಲಭವಾಗಿ ಮಾಡಬಹುದಾದ ಈ ಸೂಪರ್ ಆಗಿರೋ ವೆಜ್ ಆಮ್ಲೆಟ್ ಟ್ರೈ ಮಾಡಿ