ಸ್ವಲ್ಪ ನಿರ್ಲಕ್ಷಿಸಿದರೂ ಜೀವಕ್ಕೆ ಮಾರಕವಾಗುವ ಡೆಂಗ್ಯೂ ಬರದಂತೆ ನೋಡಿಕೊಳ್ಳುವುದು ಅತೀ ಮುಖ್ಯ.
ಮಾನ್ಸೂನ್ ಋತುವನ್ನು ಪ್ಲೂ ಸೀಸನ್ ಎಂದೂ ಕರೆಯುತ್ತಾರೆ.
ಇಂತಹುದೇ ಮಾನ್ಸೂನ್ ಕಾಯಿಲೆಯಾಗಿರೋ ಡೆಂಗ್ಯೂ ಪ್ರಕರಣಗಳು ಹೆಚ್ಚುತ್ತಿವೆ.
ಅಧ್ಯಯನಗಳ ಪ್ರಕಾರ ವಿಶ್ವದಲ್ಲಿ ಪ್ರತಿವರ್ಷ 400 ಮಿಲಿಯನ್ ಜನರು ಡೆಂಗ್ಯೂ ಸೋಂಕಿಗೆ ತುತ್ತಾಗುತ್ತಾರೆ.
ಒಂದು ಸಣ್ಣ ಸೊಳ್ಳೆಯು ವೈರಸ್ ನ್ನು ನಮ್ಮ ರಕ್ತಕ್ಕೆ ಸೇರಿಸುವ ಮೂಲಕ ಡೆಂಘಿ ಉತ್ಪಾದನೆಗೆ ಮೂಲವಾಗುತ್ತದೆ.
ಹಾಗಿದ್ದರೇ ಡೆಂಗ್ಯೂ ಬಾರದಂತೆ ವಹಿಸಬಹುದಾದ ಮುನ್ನೆಚ್ಚರಿಕೆ ಕ್ರಮಗಳ ಮಾಹಿತಿ ಇಲ್ಲಿದೆ.
FDA 2019 ರಲ್ಲಿ ಡೆಂಗ್ವಾಕ್ಸಿಯಾ ಎಂಬ ಹೊಸ ಡೆಂಗ್ಯೂ ಲಸಿಕೆಯನ್ನು ಅನುಮೋದಿಸಿದೆ.
ಡೆಂಗ್ಯೂ ಜ್ವರದಿಂದ ಪೀಡಿತರಾದ 9ರಿಂದ 45ರ ನಡುವಿನ ವಯಸ್ಸಿನ ಜನರಿಗೆ ಇದನ್ನು ನೀಡಬಹುದಾಗಿದ.
ಈ ಲಸಿಕೆಯನ್ನು 3 ತಿಂಗಳ ಅವಧಿಯಲ್ಲಿ 12 ಡೋಸ್ಗಳಲ್ಲಿ ನೀಡಲಾಗುತ್ತದೆ.
ಸೊಳ್ಳೆಗಳಿಂದ ನಮ್ಮನ್ನು ರಕ್ಷಿಸಿಕೊಳ್ಳಲು ಕೆಲವು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವುದು ಬಹಳ ಮುಖ್ಯ.