ಕೋಮಾ ಎನ್ನುವ ಪದ ಗ್ರೀಕ್ ಪದವಾಗಿದ್ದು ಭಾರತದಲ್ಲಿಯೂ ಈ ಪದವನ್ನು ಹೆಚ್ಚಾಗಿ ಬಳಸುತ್ತಾರೆ
ಕೋಮಾ ಅಂದ್ರೆ ಒಂದು ಧೀರ್ಘಕಾಲದ ಪ್ರಜ್ಞಾಹೀನ ಸ್ಥಿತಿಯಾಗಿದ್ದು , ಈ ಸ್ಥಿತಿಯಿಂದ ಹೊರಬರುವುದು ಅಷ್ಟು ಸುಲಭವಲ್ಲ
ಕೋಮಾದಲ್ಲಿ ಇರುವವರಿಗೆ , ನೋವಿನ ಪ್ರಚೋದಕಗಳು , ಬೆಳಕು ಅಥವಾ ಧ್ವನಿಗೆ ಸಾಮಾನ್ಯವಾಗಿ ಪ್ರತಿಕ್ರಿಯಿಸಲು ಸಾಧ್ಯವಾಗೋದಿಲ್ಲ
ಕೇವಲ ಉಸಿರಾಡಲು ಮಾತ್ರ ಸಾಧ್ಯವಿರುತ್ತದೆ
ಕೋಮಾ ಸಮಸ್ಯೆ ಬರಲು ಅನೇಕ ಕಾರಣಗಳಿವೆ. 40% ಜನ ಮಾದಕವಸ್ತುಗಳ ಪರಿಣಾಮದಿಂದ ಈ ಸ್ಥಿತಿಗೆ ಬರುತ್ತಾರೆ
ಆ್ಯಕ್ಸಿಡೆಂಟ್ ಆದವರಿಗೆ ಮೆದುಳು ಸರಿಯಾಗಿ ಪ್ರಚೋದಿಸುವುದಿಲ್ಲ ಹೀಗಾಗಿ ಕೋಮಾಕ್ಕೆ ಹೋಗುತ್ತಾರೆ
ಕೋಮಾ ಸ್ಥಿತಿಯಲ್ಲಿರುವ ವ್ಯಕ್ತಿಯ ಲಕ್ಷಣಗಳು ಹೀಗಗಿರುತ್ತದೆ
ಸ್ವಯಂಪ್ರೇರಣೆಯಿಂದ ಕಣ್ಣುಗಳನ್ನು ತೆರೆಯಲು ಅಸಮರ್ಥತೆ ಹೊಂದಿರುತ್ತಾರೆ
ನಿದ್ರೆಯಲ್ಲಿ ಮುಳುಗಿರುತ್ತಾರೆ
ದೈಹಿಕ ಅಥವಾ ಮೌಖಿಕ ಪ್ರಚೋದನೆಯನ್ನು ನೀಡುವುದಿಲ್ಲ
ಇಂತಹ ಪರಿಸ್ಥಿತಿಯಲ್ಲಿ ಕೋಮಾ ರೋಗಿಗಳು ಬದುಕಿರುತ್ತಾರೆ
ದೇಹದ ಫಿಟ್ನೆಸ್ಗೆ ವಾರಕ್ಕೆ ಎಷ್ಟು ನಿಮಿಷ ವ್ಯಾಯಾಮ ಮಾಡ್ಬೇಕು; ಇಲ್ಲಿದೆ ನೋಡಿ ಮಾಹಿತಿ