ಇನ್ನು ಕೆಲವೇ ಕೆಲವು ದಿನ ಬಾಕಿಯಿದೆ, ಆದ್ರೆ ಇನ್ನೂ HSRP ನಂಬರ್ ಪ್ಲೇಟ್ ಹಾಕಿಸಿಲ್ಲ ಎಂದು ಯೋಚನೆ ಮಾಡುತ್ತಿದ್ದೀರಾ? ತಲೆಬಿಸಿ ಬೇಡ, ಈ ಸುದ್ದಿ ಓದಿ
ನವೆಂಬರ್ 17 ಬದಲಿಗೆ ಫೆಬ್ರವರಿ 17ರವರೆಗೂ ವಾಹನಗಳಿಗೆ HSRP ನಂಬರ್ ಪ್ಲೇಟ್ ಅಳವಡಿಸಲು ಸಮಯಾವಕಾಶ ನೀಡುವ ಕುರಿತು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಮಹತ್ವದ ಘೋಷಣೆ ಮಾಡಿದ್ದಾರೆ
ಅಧಿಕೃತ ಗೆಜೆಟ್ ನೋಟಿಫಿಕೇಶನ್ ಈ ಕುರಿತು ಅಧಿಕೃತ ಗೆಜೆಟ್ ನೋಟಿಫಿಕೇಶನ್ ಸದ್ಯವೇ ಬಿಡುಗಡೆಯಾಗಲಿದ್ದು, ವಾಹನಗಳ ಮಾಲೀಕರು ತಲೆಬಿಸಿ ಬಿಟ್ಟು ಹೊಸ ನಂಬರ್ ಪ್ಲೇಟ್ ಮಾಡಿಸಿಕೊಳ್ಳಬಹುದಾಗಿದೆ
HSRP ನಂಬರ್ ಪ್ಲೇಟ್ ಅಳವಡಿಕೆ ಮಾಡದಿದ್ದಲ್ಲಿ 500ರೂ.ವಿನಿಂದ 1 ಸಾವಿರ ರೂ.ವರೆಗೂ ದಂಡ ವಿಧಿಸುವ ಸಾಧ್ಯತೆ ಇದೆ ಎಂದು ಸೂಚನೆಯಲ್ಲಿ ತಿಳಿಸಲಾಗಿದೆ
ಒಂದು ಅಂದಾಜಿನ ಪ್ರಕಾರ ಸುಮಾರು 1.75 ಕೋಟಿಯಿಂದ 2 ಕೋಟಿ ವಾಹನಗಳಿಗೆ ಏಪ್ರಿಲ್ 1, 2019ಕ್ಕೂ ಮುನ್ನ ನೋಂದಣಿಯಾಗಿದೆ
ಏನಿದು HSRP ನಂಬರ್ ಪ್ಲೇಟ್? ಏನಿದು HSRP ನಂಬರ್ ಪ್ಲೇಟ್ ಎಂದು ನೋಡೋದಾದ್ರೆ, ಇದು ನಿಮ್ಮ ವಾಹನಕ್ಕೆ ಶಾಶ್ವತ ಗುರುತಿನ ನಂಬರ್ ಒದಗಿಸುತ್ತದೆ
4 ಚಕ್ರದ ವಾಹನಗಳಿಗೆ 400 ರೂ.ವಿನಿಂದ 500 ರೂ. ನೀಡಿ ಈ ನಂಬರ್ ಪ್ಲೇಟ್ ಅಳವಡಿಸಬಹುದಾಗಿದೆ. ಇನ್ನು ದ್ವಿಚಕ್ರ ವಾಹನಗಳಿಗೆ 250 ರೂ.ವಿನಿಂದ 300 ರೂ.ಗೆ ಈ ನಂಬರ್ ಪ್ಲೇಟ್ ಅಳವಡಿಸಬಹುದಾಗಿದೆ