ಶ್ರೀಕೃಷ್ಣ ಗೋರ್ವಧನ ಬೆಟ್ಟ ಎತ್ತಿ ಪವಾಡ ತೋರಿಸಿದ್ದು, ಬಕಾಸುರನಿಗೆ ಸೋಲುಣಿಸಿದ್ದು ಇದೇ ನದಿ ತಟದ ಪ್ರದೇಶಗಳಲ್ಲಿ ಅನ್ನೋದು ನಂಬಿಕೆ

ಅಷ್ಟೇ ಅಲ್ಲ, ಕೃಷ್ಣಾ ನದಿಯ ತಟದಲ್ಲಿಯೇ ಶ್ರೀಕೃಷ್ಣ ತನ್ನ ಬಾಲ್ಯದ ದಿನಗಳನ್ನು ಕಳೆದಿದ್ದ ಅನ್ನೋ ಪ್ರತೀತಿ ಇದೆ

ಕೆಲವು ನಂಬಿಕೆಗಳ ಪ್ರಕಾರ, ಸರಸ್ವತಿ ಶಾಪದಿಂದಾಗಿ ತ್ರಿಮೂರ್ತಿಗಳು ಗಂಗಾ, ಯಮುನಾ ಹಾಗೂ ಕೃಷ್ಣಾ ನದಿಗಳಾಗಿ ಹರಿದರು ಅನ್ನೋದಾಗಿಯೂ ಇದೆ

ಶಾತವಾಹನ, ವಿಜಯನಗರ ಸಹಿತ ಹಲವು ರಾಜಮನೆತಗಳು ಈ ನದಿಯನ್ನೇ ಆಶ್ರಯಿಸಿತ್ತು

ಈ ನದಿಯಲ್ಲಿ ಸ್ನಾನ ಮಾಡುವುದರಿಂದ ಪಾಪಗಳು ದೂರವಾಗುತ್ತದೆ ಅನ್ನೋ ನಂಬಿಕೆಯೂ ಇದೆ. ಇಂದಿಗೂ ಕೃಷಿ, ಕೈಗಾರಿಕೆಗಳಿಗೆ ಜನರು ಅಪಾರವಾಗಿ ಕೃಷ್ಣಾ ನದಿ ಅವಲಂಬಿಸಿದ್ದಾರೆ

ಭಾರತದ ನಾಲ್ಕನೇಯ ಅತಿ ದೊಡ್ಡ ಹಾಗೂ ಕರ್ನಾಟಕದ ಅತಿ ಉದ್ದವಾದ ನದಿಯಾಗಿದೆ. ಇದು ಕರ್ನಾಟಕದಲ್ಲಿ ಸುಮಾರು 480 ಕಿಲೋ ಮೀಟರ್‌ನಷ್ಟು ಹರಿಯುತ್ತದೆ

ಅರಬ್ಬೀ ಸಮುದ್ರ ಕೇವಲ 60 ಕಿಲೋ ಮೀಟರ್‌ ದೂರದಲ್ಲಿ ಹುಟ್ಟಿದರೂ ಉತ್ತರಾಭಿಮುಖವಾಗಿ 1,400 ಕಿಲೋ ಮೀಟರ್‌ ದೂರ ಹರಿದು ಬಂಗಾಳಕೊಲ್ಲಿ ಸೇರುತ್ತದೆ

ತುಂಗಭದ್ರಾ, ಘಟಪ್ರಭಾ, ಮಲಪ್ರಭಾ, ಭೀಮ, ಕೊಯ್ನ, ಇಂದ್ರನಿ, ದೂದಗಾಂಗ, ವೇದಗಂಗಾ, ಪಂಚಾಗಂಗಾ, ಮುಶಿ, ದಿಂಡಿ ಅಗ್ರಣಿ ನದಿ ಮೊದಲಾದ 25 ಕ್ಕೂ ಅಧಿಕ ಉಪನದಿಗಳನ್ನು ಕೃಷ್ಣಾ ನದಿಯು ಹೊಂದಿದೆ

ಕೃಷ್ಣ ನದಿಯು ಮಹಾರಾಷ್ಟ್ರ, ಕರ್ನಾಟಕ, ತೆಲಂಗಾಣ, ಆಂಧ್ರ ಪ್ರದೇಶ ರಾಜ್ಯಗಳ ಜಲಾನಯನ ಪ್ರದೇಶ ಹೊಂದಿದೆ

ಕರ್ನಾಟಕದ ಆಲಮಟ್ಟಿ ಜಲಾಶಯ ಕೃಷ್ಣ ನದಿಯ ಬಹುದೊಡ್ಡ ಅಂಗವಾಗಿದೆ. ಇಲ್ಲಿ ಮಲಪ್ರಭಾ ನದಿಯು ಕೃಷ್ಣ ನದಿಯೊಂದಿಗೆ ವಿಲೀನಗೊಳ್ಳುತ್ತದೆ