ಮಳೆಯಲ್ಲಿ ಒದ್ದೆಯಾದ ತಕ್ಷಣ ಹೀಗೆ ಮಾಡಿದರೆ ನೆಗಡಿ, ಕೆಮ್ಮು ಬರುವುದಿಲ್ಲ
ಮಳೆಗಾಲದಲ್ಲಿ ನೀರಿನಲ್ಲಿ ನೆನೆಯಲು ಹಲವರಿಗೆ ತುಂಬಾ ಇಷ್ಟವಿರುತ್ತದೆ
ಇನ್ನು ಕೆಲವರಿಗೆ ನೆನೆಯಲು ಇಷ್ಟವಿರುವುದಿಲ್ಲ ಆದರೂ ನೆನೆದುಬಿಡುತ್ತಾರೆ
ಅದೇನೇ ಆದರು ಮಳೆಯಲ್ಲಿ ನೆನೆದರೆ ಆರೋಗ್ಯ ಕೆಡುವುದು ಖಂಡಿತ
ಮಳೆಯಲ್ಲಿ ನೆನೆದ ನಂತರ ಈ ಟಿಪ್ಸ್ ಫಾಲೋ ಮಾಡಿ
ಮಳೆಗಾಲದಲ್ಲಿ ನೀವು ನೀರಿನಲ್ಲಿ ನೆನೆದರೂ ನಿಮ್ಮ ತಲೆ ಅಥವಾ ಕೂದಲು ನೆನೆಯಲು ಬಿಡಬಾರದು. ರೈನ್ ಕೋಟ್ ಧರಿಸಿದರೆ ಉತ್ತಮ
ಮಳೆಯಲ್ಲಿ ಒದ್ದೆಯಾಗುವುದು ಸಹಜ ಆದರೆ ನೀವು ತಕ್ಷಣ ಮಳೆಯಲ್ಲಿ ನೆನೆದ ಎಲ್ಲಾ ಬಟ್ಟೆಗಳನ್ನು ಬದಿಗಿಟ್ಟು ಹೊಸ ವಸ್ತ್ರ ಧರಿಸಿ
ಮಳೆಯಲ್ಲಿ ಒದ್ದೆಯಾದ ನಂತರ ಚಳಿಯಾಗುವುದು ಸಹಜ. ಆದ್ದರಿಂದ ಶೀತ ಮತ್ತು ಜ್ವರವನ್ನು ತಪ್ಪಿಸಲು ಬಿಸಿ ಚಹಾವನ್ನು ಕುಡಿಯಿರಿ
ಕೆಲವರು ಮಳೆಗಾಲದಲ್ಲಿ ಪಾದಗಳನ್ನು ನಿರ್ಲಕ್ಷ ಮಾಡುತ್ತಾರೆ. ನೀವು ಮಳೆಗಾಲದಲ್ಲಿ ಹೆಚ್ಚಾಗಿ ನಿಮ್ಮ ಕಾಲು ಪಾದಗಳ ಬಗ್ಗೆ ಗಮನಹರಿಸಬೇಕು
ಹೀಗೆ ಮಾಡುವುದರಿಂದ ನೆಗಡಿ, ಕೆಮ್ಮು ಬರುವುದಿಲ್ಲ