ಇಂತಹದ್ದೊಂದು ಅದ್ಭುತ ಪರಿಕಲ್ಪನೆಯ ವನವನ್ನು ಮೈಸೂರಿನ ಅರಣ್ಯ ಇಲಾಖೆ ಹಲವು ವರ್ಷಗಳ ಹಿಂದೆ ನಿರ್ಮಿಸಿದೆ. ಹಾಗಿದ್ರೆ ಈ ಹಸಿರು ಜಾತಕ ವನ ಹೇಗಿದೆ ಅನ್ನೋದನ್ನ ನೋಡೋಣ ಬನ್ನಿ
ಯಾವ ರಾಶಿ, ಯಾವ ಗಿಡ? ಮೇಷ ರಾಶಿಯವರಿಗೆ ರಕ್ತ ಚಂದನ , ಕನ್ಯಾ ರಾಶಿಯವರಿಗೆ ಮಾವು, ಮಿಥುನ ರಾಶಿಯವರಿಗೆ ಹಲಸು, ವೃಷಭ ರಾಶಿಯವರಿಗೆ ಮದ್ದಾಲೆ, ಕಟಕದವರಿಗೆ ಮುತ್ತುಗ, ಸಿಂಹ ರಾಶಿಯವರಿಗೆ ಪಟರಿ, ತುಲಾ ರಾಶಿಯವರಿಗೆ ರಂಜಲಮ, ವೃಶ್ಚಿಕದವರಿಗೆ ಕಗ್ಗಲಿ
ಧನಸ್ಸು ರಾಶಿಯವರಿಗೆ ಅರಳಿ, ಮಕರ ರಾಶಿಯವರಿಗೆ ಬೀಟೆ, ಕುಂಭ ರಾಶಿಯವರಿಗೆ ಬನ್ನಿ, ಮೀನ ರಾಶಿಯವರಿಗೆ ಆಲದ ಗಿಡ ನೆಟ್ಟರೆ ಒಳ್ಳೆಯದ್ದಾಗುತ್ತಾದೆ ಎನ್ನುವ ನಂಬಿಕೆಯನ್ನ ಇಲ್ಲಿ ಬಿಂಬಿಸಲಾಗಿದೆ
ಮಿಥುನ ರಾಶಿಯ ಮೃಗಶಿರಾ ನಕ್ಷತ್ರದವರಿಗೆ ಖದೀರ, ಆರಿದ್ರಾ ನಕ್ಷತ್ರದವರಿಗೆ ಶಿವಣಿ, ಪುನರ್ವಸು ನಕ್ಷತ್ರದವರಿಗೆ ಬಿದಿರು, ಕಟಕ ರಾಶಿಯ ಪುನರ್ವಸು ನಕ್ಷತ್ರದವರಿಗೆ ಬಿದಿರು, ಪುಶ್ಯ ನಕ್ಷತ್ರದವರಿಗೆ ಅರಳಿ, ಆಶ್ಲೇಷ ನಕ್ಷತ್ರದವರಿಗೆ ನಾಗಸಂಪಿಗೆ, ಸಿಂಹ ರಾಶಿಯಲ್ಲಿ ಮಘಾ ನಕ್ಷತ್ರದವರಿಗೆ ಆಲ, ಪುಬ್ಬಾ ನಕ್ಷತ್ರದವರಿಗೆ ಮುತ್ತುಗ, ಉತ್ತರಾ ನಕ್ಷತ್ರದವರಿಗೆ ಬಸರಿ ಗಿಡ