ಬಾಲಿವುಡ್ ಖ್ಯಾತ ನಿರ್ದೇಶಕ ಎಆರ್ ರೆಹಮಾನ್ ವಿರುದ್ಧ ಅಸೋಸಿಯೇಷನ್ ಆಫ್ ಸರ್ಜನ್ ಆಫ್ ಇಂಡಿಯಾ ಇತ್ತೀಚಿಗೆ ದೂರು ನೀಡಿತ್ತು

ಈ ದೂರಿನಿಂದ ಕೆರಳಿದ ಎಆರ್ ರೆಹಮಾನ್ ಮಾಡಿದ್ದೇನು ಗೊತ್ತಾ?

ಸರ್ಜನ್ ಅಸೋಸಿಯೇಶನ್ 2018ರಲ್ಲಿ ತಮ್ಮ ಕಾನ್ಫರೆನ್ಸ್​ಗಾಗಿ ಮ್ಯೂಸಿಕಲ್ ನೈಟ್ ಕಾರ್ಯಕ್ರಮ ಆಯೋಜಿಸಿತ್ತು

ಎಆರ್ ರೆಹಮಾನ್​ಗೆ ಬುಕ್ಕಿಂಗ್ ಹಣವನ್ನು ನೀಡಿತ್ತು. ಆದ್ರೆ ಕಾರ್ಯಕ್ರಮ ಕ್ಯಾನ್ಸಲ್ ಆದ್ರೂ ಗಾಯಕ ಹಣ ವಾಪನ್ ನೀಡಿಲ್ಲ ಎನ್ನುವ ಆರೋಪ ಮಾಡಿದ್ದಾರೆ. ಸರ್ಕಾರದಿಂದ ಅನುಮತಿ ನೀಡದ ಕಾರಣ ಕಾರ್ಯಕ್ರಮವನ್ನು ರದ್ದುಗೊಳಿಸಲಾಯಿತು

ಆದ್ರೆ ಸಂಗೀತ ನಿರ್ದೇಶಕ ಎಆರ್ ರೆಹಮಾನ್ ಪಡೆದ ಮುಂಗಡ ಹಣವನ್ನು ವಾಪಸ್ ಕೊಟ್ಟಿಲ್ಲ ಎಂದು ಅಸೋಸಿಯೇಶನ್ ಇತ್ತೀಚಿಗೆ ಕಂಪ್ಲೇಂಟ್ ಮಾಡಿದೆ

ಈ ಕಾರ್ಯಕ್ರಮಕ್ಕಾಗಿ ಎ. ಆರ್ ರೆಹಮಾನ್ ಅವರಿಗೆ 29 ಲಕ್ಷದ 50 ಸಾವಿರ ರೂಪಾಯಿ ನೀಡಲಾಗಿತ್ತಂತೆ

 ವಾಪಸ್ ಕೇಳಿದಾಗ ವೇಳೆ ಪೋಸ್ಟ್ ಡೇಟೆಡ್ ಖಾಲಿ ಚೆಕ್ ವಾಪಸ್ ಬಂದಿದೆ ಎಂದು ಆರೋಪಿಸಲಾಗಿದೆ

ಸರ್ಜರಿ ಅಸೋಸಿಯೇಸ್ ಚೆನ್ನೈ ಮಹಾನಗರ ಪೊಲೀಸ್ ಆಯುಕ್ತರಿಗೆ ದೂರು ಸಲ್ಲಿಸಲಾಗಿತ್ತು. ವಕೀಲರ ಮೂಲಕ ಎಆರ್ ರಹಮಾನ್ ಅವರಿಗೆ ನೋಟಿಸ್ ಕೂಡ ಕಳುಹಿಸಲಾಗಿದೆ

ಪಿತೃಪಕ್ಷದಲ್ಲಿ ಹೀಗೆಲ್ಲಾ ಕನಸು ಬಿದ್ರೆ ಫುಲ್ ಲಕ್​ ಅಂತೆ

ಈ ಸಂಬಂಧ ಎಆರ್ ರೆಹಮಾನ್ ಪರವಾಗಿ ಮದ್ರಾಸ್ ಹೈಕೋರ್ಟ್ ವಕೀಲ ನರ್ಮದಾ ಸಂಪತ್ ಉತ್ತರ ನೋಟಿಸ್ ಕಳುಹಿಸಿದ್ದಾರೆ

ಅವರಲ್ಲಿ ಸಂಗೀತ ಕ್ಷೇತ್ರದಲ್ಲಿ ಹಲವಾರು ಪ್ರಶಸ್ತಿಗಳನ್ನು ಪಡೆದು ಗೌರವಾನ್ವಿತ ವ್ಯಕ್ತಿಯಾಗಿರುವ ಎ.ಆರ್.ರಘುಮಾನ್ ಅವರು ಸಮಾಜದಲ್ಲಿ ಹಲವು ಕ್ಷೇತ್ರಗಳಲ್ಲಿ ಹಲವಾರು ಉತ್ತಮ ಕಾರ್ಯಗಳನ್ನು ಮಾಡಿದ್ದಾರೆ ಎಂದು ಪತ್ರ ಆರಂಭಿಸಿದ್ದಾರೆ

ಅಸೋಸಿಯೇಷನ್ ಆಫ್ ಸರ್ಜನ್ ಆಫ್ ಇಂಡಿಯಾ ಎ ಆರ್ ರೆಹಮಾನ್ ವಿರುದ್ಧ ಮಾಡಿರುವ ಆರೋಪ ಸುಳ್ಳಾಗಿದ್ದು, ಮಾನಹಾನಿ ಮಾಡುವಂತಹದ್ದಾಗಿದೆ. ಈ ಸಂಸ್ಥೆಯೊಂದಿಗೆ ಯಾವುದೇ ಸಂಪರ್ಕ, ಒಪ್ಪಂದ ಇಲ್ಲದಿದ್ರೂ ಪ್ರಚಾರಕ್ಕಾಗಿ ಇಂತಹ ಆರೋಪಗಳನ್ನು ಮಾಡುತ್ತಿದ್ದಾರೆ ಎಂದು ಆರ್ ರೆಹಮಾನ್ ಪರ ವಕೀಲರು ಟೀಕಿಸಿದ್ದಾರೆ

ಎ ಆರ್ ರೆಹಮಾನ್ ಸಮಾಜದಲ್ಲಿ ತಮ್ಮ ಗೌರವಕ್ಕೆ ಧಕ್ಕೆ ತಂದಿದ್ದಕ್ಕೆ 10 ಕೋಟಿ ರೂಪಾಯಿ ಪರಿಹಾರ ನೀಡಬೇಕು, ತಪ್ಪಿದಲ್ಲಿ ಕಾನೂನು ಮತ್ತು ಕ್ರಿಮಿನಲ್ ಮೊಕದ್ದಮೆ ಎದುರಿಸಬೇಕಾಗುತ್ತದೆ ಎಂದು ರೆಹಮಾನ್ ಪರ ವಕೀಲರು ಎಚ್ಚರಿಕೆ ನೀಡಿದ್ದಾರೆ

40 ಸಾವಿರಕ್ಕಿಂತ ಕಡಿಮೆ ಬೆಲೆಗೆ ಸಿಗುತ್ತೆ ಹೊಸ ಐಫೋನ್!