ಸ್ಯಾಂಡಲ್​ವುಡ್​ ಮಾತ್ರವಲ್ಲದೇ ಬಾಲಿವುಡ್​ನಲ್ಲಿ ಸಹ ಪ್ಯಾನ್ ಇಂಡಿಯಾ ಚಿತ್ರದ ಮೂಲಕ ಫೇಮಸ್​ ಆಗಿರುವ ನಟ ಎಂದರೆ ಯಶ್​

ಸದ್ಯ ಅಭಿಮಾನಿಗಳು ಯಶ್ ಮುಂದಿನ ಸಿನಿಮಾ ಬಗ್ಗೆ ಕಾತರದಿಂದ ಕಾಯುತ್ತಿದ್ದಾರೆ

ಆದರೆ ಅದರ ಮಾಹಿತಿ ಇನ್ನೂ ಸಿಕ್ಕಿಲ್ಲ

ಜ್ಯೋತಿಷ್ಯದ ಪ್ರಕಾರ ಯಶ್​ ಮುಂದಿನ ಭವಿಷ್ಯ ಹೇಗಿರಲಿದೆ? ಸಿನಿಮಾ ಜೀವನದಲ್ಲಿ ಏನಾಗುತ್ತದೆ ಎಂಬುದರ ಸಂಕ್ಷಿಪ್ತ ಮಾಹಿತಿ ಇಲ್ಲಿದೆ

ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಹಾಲಿವುಡ್ ಕ್ಯಾರೆಕ್ಟರ್‌ಗಳಲ್ಲಿ ಹೀಗೆ ಕಾಣಿಸ್ತಾರೆ ನೋಡಿ!

ಸದ್ಯ ಸಿನಿಮಾ ಜಗತ್ತಿನಲ್ಲಿ ಬಹಳ ಕುತೂಹಲ ಮೂಡಿಸಿರುವ ವಿಚಾರ ಎಂದರೆ ರಾಕಿಂಗ್ ಸ್ಟಾರ್​ ಯಶ್​ ಅವರ ಮುಂದಿನ ಸಿನಿಮಾ ಯಾವುದು ಎಂಬುದು

ಕೆಜಿಎಫ್​ ಚಾಪ್ಟರ್​ 2 ನಂತರ ಬಹಳ ಸೈಲೆಂಟ್​ ಆಗಿರುವ ರಾಕಿ ಭಾಯ್ ಮುಂದಿನ ನಡೆ ಏನು ಎಂಬುದು ಎಲ್ಲರ ಪ್ರಶ್ನೆ

ಯಶ್​-19 ಅಂದರೆ ನಟ ಯಶ್​ ಅಭಿನಯದ 19ನೇ ಚಿತ್ರ ಯಾವುದು, ಕಥೆ ಏನಿರಬಹುದು ಹೀಗೆಲ್ಲಾ ಅನೇಕ ಪ್ರಶ್ನೆಗಳ ಜೊತೆಗೆ ಊಹಾಪೋಹಾಗಳು ಸಹ ಸಾಕಷ್ಟು ಹರಿದಾಡಿದೆ

ಆದರೆ ಯಶ್ ಮಾತ್ರ ಯಾವುದಕ್ಕೂ ಉತ್ತರ ನೀಡದೆ ಸುಮ್ಮನಿದ್ದಾರೆ.ಕೆಲವರು ಯಶ್ ಕೆಜಿಎಫ್ 3 ಮಾಡ್ತಾರೆ ಅಂದರೆ ಇನ್ನೂ ಕೆಲವರು ಬೇರೆ ಸಿನಿಮಾ ಅಂತ ಹೇಳ್ತಾರೆ

ಡ್ರಿಂಕ್ ಅಂಡ್​ ಡ್ರೈವ್ ಮಾಡಿ ಸಿಕ್ಕಿಬಿದ್ದಿದ್ರಾ ನಟ ಅಲ್ಲು ಅರ್ಜುನ್​! ರೀಲ್​ ಅಲ್ಲ ರಿಯಲ್​

ಒಟ್ಟಾರೆ ಎಲ್ಲರ ಕಣ್ಣು ಯಶ್ ಮೇಲಿದೆ. ನಾವು ಸಂಖ್ಯಾಶಾಸ್ತ್ರದ ದೃಷ್ಟಿಯಿಂದ ಯಶ್ ಸಿನಿಮಾ ವಿಳಂಬವಾಗುತ್ತಿರಲು ಕಾರಣ ಹಾಗೂ ಅವರ ಮುಂದಿನ ಭವಿಷ್ಯ ಹೇಗಿರಲಿದೆ ಎಂಬುದನ್ನ ಊಹಿಸಿದ್ದು, ಮಾಹಿತಿ ಇಲ್ಲಿದೆ

ಯಶ್​ ಜನ್ಮ ದಿನಾಂಕ 8 ಜನವರಿ 1986, ಈ ನಂಬರ್ ಪ್ರಕಾರ ಅಂದರೆ 8 ಎಂದರೆ ಜೀವನದಲ್ಲಿ ಬಹಳ ಕಷ್ಟಪಟ್ಟು ಮೇಲೆ ಬರುತ್ತಾರೆ ಎಂಬುದು. ಯಶ್​ ಜೀವನದ ಬಗ್ಗೆ ಎಲ್ಲರಿಗೂ ಗೊತ್ತಿದೆ. ಹಾಗೆಯೇ, ಅವರ ಜನ್ಮ ದಿನಾಂಕ ಒಟ್ಟು ಸೇರಿಸಿದರೆ 6 ಆಗುತ್ತದೆ

ಸಂಖ್ಯೆ 6 ಬಹಳ ಒಳ್ಳೆಯದು ಎನ್ನಲಾಗುತ್ತದೆ. ಅದರಲ್ಲೂ ಇದು ಕಲಾವಿದರಿಗೆ ಅದೃಷ್ಟವಂತೆ. ಹಾಗಾಗಿ ಯಶ್​ ಸಿನಿಮಾ ರಂಗದಲ್ಲಿ ಈ ಮಟ್ಟಕ್ಕೆ ಬೆಳೆದಿದ್ದಾರೆ. ಇನ್ನು ಜ್ಯೋತಿಷ್ಯದ ಪ್ರಕಾರ ಅವರದ್ದು ವೃಶ್ಚಿಕ ರಾಶಿ. ಈ ರಾಶಿಯವರಿಗೆ ಅರ್ಧಾಷ್ಟಮಿ ಶನಿ ನಡೆಯುತ್ತಿದೆ. ಹಾಗಾಗಿ ಕೆಲಸ ನಿಧಾನವಾಗುತ್ತಿದೆ

ಇದರ ಜೊತೆಗೆ ಸದ್ಯದ ಪ್ರಕಾರ ಅವರ ರಾಶಿಯ ಅನುಸಾರ ಯಶ್ ಅವರಿಗೆ ಗುರುಬಲ ಇಲ್ಲ. ಮುಂದಿನ ವರ್ಷ ಅಂದರೆ 2024ರ ಏಪ್ರಿಲ್ ತನಕ ಗುರುಬಲ ಇಲ್ಲದ ಕಾರಣ ಸಹ ಸಿನಿಮಾಗಳು ಲೇಟ್ ಆಗುತ್ತಿದೆ ಎನ್ನಬಹುದು. ಆದರೆ ಅದರ ನಂತರ ಮತ್ತೆ ಅವರದ್ದೇ ಆರ್ಭಟ

ವಿಶ್ವಕಪ್ ಗೆಲ್ಲುತ್ತಾ ಟೀಂ ಇಂಡಿಯಾ? ಕೊಹ್ಲಿ ಜಾತಕ ಏನ್ ಹೇಳುತ್ತೆ?