ಶ್ರಾವಣ ಮಾಸದಲ್ಲಿ ನಾನ್ ವೆಜ್ ಮುಟ್ಟಲೇಬಾರದು ಅನ್ನೋದು ಇದೇ ಕಾರಣಕ್ಕೆ!

ಈ ತಿಂಗಳಲ್ಲಿ ಹೆಚ್ಚಿನ ಜನರು ಮಾಂಸಾಹಾರದಿಂದ ದೂರವಿರುತ್ತಾರೆ.

ಮನೆಯ ಹಿರಿಯರು ಮನೆ ಮಂದಿಗೆಲ್ಲ ಈ ಒಂದು ತಿಂಗಳು ನಾನ್ ವೆಜ್ ತಿನ್ನಬೇಡಿ ಎಂದು ಸಲಹೆ ನೀಡುತ್ತಾರೆ.

ಈ ಸಂಪ್ರದಾಯದ ಹಿಂದೆ ಧಾರ್ಮಿಕ ಮಾತ್ರವಲ್ಲ ವೈಜ್ಞಾನಿಕ ಕಾರಣಗಳಿವೆ ಎಂದು ನಿಮಗೆ ತಿಳಿದಿದ್ಯಾ?

ಆಗಸ್ಟ್ 5 ರಿಂದ ಶ್ರಾವಣ ಆರಂಭವಾಗಿದ್ದು, ಈ ಮಾಸದಲ್ಲಿ ಶಿವ ಭಕ್ತರು ಅನುಸರಿಸಬೇಕಾದ ಕೆಲವು ನಿಯಮಗಳಿವೆ.

ಮಾಂಸಾಹಾರದಂಥಾ ಕಠಿಣ ಪದಾರ್ಥವನ್ನು ದೇಹ ಸರಿಯಾಗಿ ಜೀರ್ಣಿಸುವುದು ಕಷ್ಟ.

ಆದ್ದರಿಂದ ಶ್ರಾವಣ ಮಾಸದಲ್ಲಿ ಸಸ್ಯಾಹಾರವನ್ನು ಸೇವಿಸುವುದು ಉತ್ತಮ ಎನ್ನುವ ಲೆಕ್ಕಾಚಾರವಿದೆ.

ತಲತಲಾಂತರದಿಂದ ಮುಂದುವರೆದಿರುವ ಈ ಆಚರಣೆ ಮನುಷ್ಯನ ದೇಹ ಮತ್ತು ಆರೋಗ್ಯಕ್ಕೂ ಉತ್ತಮ,

ಪ್ರಾಣಿಗಳು ಮತ್ತು ಪ್ರಕೃತಿಯ ಒಳಿತಿಗೂ ಉತ್ತಮವಾದ ದೃಷ್ಟಿಯನ್ನು ಇಟ್ಟುಕೊಂಡೇ ಮಾಡಲಾಗಿದೆ ಎನ್ನಲಾಗಿದೆ.

ಶ್ರಾವಣದಲ್ಲಿ ಇದೇ ಕಾರಣಕ್ಕೆ Non-Veg ತಿನ್ಬಾರ್ದು!