ಬೆಂಗಳೂರಿನ ಹೋಟೆಲ್ ಮಾಲೀಕರು ಇದೇ ಸಂಕಷ್ಟವನ್ನು ಎದುರಿಸುತ್ತಿದ್ದು 

ಬರೇ ಕಾಫಿ ಕುಡಿದು ಗಂಟೆ ಗಟ್ಟಲೆ ಹರಟೆ ಹೊಡೆಯುತ್ತಾ ಬೇರೆ ಗ್ರಾಹಕರಿಗೆ ಕುರ್ಚಿ ಬಿಟ್ಟೇಳದ ಗ್ರಾಹಕರಿಂದಾಗಿ ಕೈ ಕೈ ಹಿಸುಕಿಕೊಳ್ಳುತ್ತಿದ್ದಾರೆ

ಇದಕ್ಕೆ ಪರಿಹಾರ ಹುಡುಕುವ ದಿಸೆಯಲ್ಲಿ ಬೃಹತ್ ಬೆಂಗಳೂರು ಹೋಟೆಲ್‌ಗಳ ಸಂಘ ಹೀಗೆ ಯೋಚಿಸಿದೆ

ಊಟ ತಿಂಡಿಯ ನಂತರ ಬಿಲ್ ಪೇ ಮಾಡಿ ಹೊರಡಿ ಎಂಬ ಬೋರ್ಡ್ ಅನ್ನು ಪ್ರತಿಯೊಂದು ಟೇಬಲ್ ಮೇಲೆ ಇರಿಸುವ ನಿರ್ಧಾರ ಕೈಗೊಂಡಿದೆ

ಇಲ್ಲದಿದ್ದರೆ ಊಟ ಮುಗಿಸಿದ ಗ್ರಾಹಕರಿಗೆ ವಿನಮ್ರರಾಗಿ ಟೇಬಲ್ ಬಿಟ್ಟೇಳುವಂತೆ ವಿನಂತಿಸುವುದಾಗಿ ಮಾಲೀಕರು ತಿಳಿಸಿದ್ದು,

ತಮ್ಮ ಗ್ರಾಹಕರಿಗೆ ಯಾವುದೇ ಮುಜುಗರ ಹಾಗೂ ಮುನಿಸು ಉಂಟುಮಾಡದೇ ವ್ಯವಹರಿಸುವ ನಿರ್ಧಾರ ಕೈಗೊಂಡಿರುವುದಾಗಿ ತಿಳಿಸಿದ್ದಾರೆ

ಈ ರೀತಿ ಹೇಳುವ ಮೂಲಕ ಗ್ರಾಹಕರ ಮೇಲೆ ನಾವು ಒತ್ತಡ ಹೇರುತ್ತಿಲ್ಲ ಬದಲಿಗೆ ಶಿಷ್ಟಾಚಾರದಿಂದ ನಾವು ಅವರಿಗೆ ಪರಿಸ್ಥಿತಿಯ ಬಗ್ಗೆ ತಿಳಿಯಪಡಿಸುತ್ತಿದ್ದೇವೆ

ಹೊರಗಡೆ ವಿಪರೀತ ರಶ್ ಇದ್ದಾಗ ಕೂಡ ಗ್ರಾಹಕರು ಟೇಬಲ್ ಬಿಟ್ಟು ಕದಲುವುದಿಲ್ಲ ಹೀಗಿದ್ದಾಗ ಅವರಿಗೆ ನಾವು ಮನವರಿಕೆ ಮಾಡಬೇಕಾಗುತ್ತದೆ 

ಬಾವಿ ಏಕೆ ವೃತ್ತಾಕಾರದಲ್ಲಿ​ ಇರುತ್ತೆ? ಇದಕ್ಕೆ ಕಾರಣ ಇಲ್ಲಿದೆ ನೋಡಿ!

ಎಂದು ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷರಾದ ಪಿ.ಸಿ ರಾವ್ ತಿಳಿಸುತ್ತಾರೆ

ಸಾಮಾನ್ಯವಾಗಿ ಹೋಟೆಲ್‌ಗಳಲ್ಲಿ ಗ್ರಾಹಕರು ರಿಯಲ್ ಎಸ್ಟೇಟ್, ಮ್ಯಾಟ್ರಿಮೋನಿಯಲ್ ಹಾಗೂ ಬ್ಯುಸಿನೆಸ್ ಚರ್ಚೆಗಳನ್ನೇ ಹೆಚ್ಚಾಗಿ ನಡೆಸುತ್ತಾ ಕಾಲಹರಣ ಮಾಡುತ್ತಾರೆ 

ಇದಲ್ಲದೆ ವಕೀಲರು ಕೂಡ ತಮ್ಮ ಕೇಸುಗಳ ಬಗ್ಗೆ ಚರ್ಚಿಸಲು ಹೋಟೆಲ್‌ಗಳನ್ನೇ ಆಯ್ದುಕೊಳ್ಳುತ್ತಿದ್ದು

ಒಂದು ಕಪ್ ಕಾಫಿ ಆರ್ಡರ್ ಮಾಡಿ ಉದ್ಯೋಗ ಸಂದರ್ಶನಗಳನ್ನು ನಡೆಸುವುದನ್ನು ನಾವು ನೋಡುತ್ತೇವೆ ಎಂದು ರಾವ್ ತಿಳಿಸಿದ್ದಾರೆ