ಐಪಿಎಲ್ ನಲ್ಲಿ ಸರ್ಫರಾಜ್ ಖಾನ್ ಆಡುತ್ತಾರೆಯೇ ಎಂಬ ಪ್ರಶ್ನೆ ಎಲ್ಲಡೆ ಚರ್ಚೆಯಾಗುತ್ತಿದೆ.

ಟೆಸ್ಟ್ ಸರಣಿಯಲ್ಲಿ ಅದ್ಭುತ ಪ್ರದರ್ಶನ ನೀಡಿದ ಸರ್ಫರಾಜ್ ಎಲ್ಲರ ಗಮನ ಸೆಳೆದಿದ್ದಾರೆ.

ಸರ್ಫರಾಜ್ ಅಭಿಮಾನಿಗಳು ಅವರು ಐಪಿಎಲ್ ಆಡಬೇಕು ಎಂಬ ಆಶಯ ವ್ಯಕ್ತಪಡಿಸುತ್ತಿದ್ದಾರೆ.

ಆದರೆ ಸರ್ಫರಾಜ್​ ಈ ಭಾರಿ ಐಪಿಎಲ್ ಹರಾಜಿನಲ್ಲಿ ಮಾರಾಟವಾಗಿರಲಿಲ್ಲ.

ಸರ್ಫರಾಜ್ 18 ವರ್ಷ ವಯಸ್ಸಿನಿಂದಲೂ ಐಪಿಎಲ್‌ನಲ್ಲಿ ಆಡುತ್ತಿದ್ದಾರೆ.

ಆದರೆ ಸರ್ಫರಾಜ್ ಅವರಿಗೆ ನಿರಂತರ ಅವಕಾಶಗಳು ಸಿಗಲಿಲ್ಲ.

ಐಪಿಎಲ್ 2024ರಲ್ಲಿ ಆಡುವ ಸಾಧ್ಯತೆಗಳು ತುಂಬಾ ಕಡಿಮೆ ಇದೆ ಎನ್ನಲಾಗುತ್ತಿದೆ.

ಆದರೆ ಯಾವುದೇ ತಂಡದ ಆಟಗಾರ ಗಾಯಗೊಂಡು ಟೂರ್ನಿಯಿಂದ ಹೊರನಡೆದರೆ ಮಾತ್ರ ಅವಕಾಶವಿದೆ.

ಆಗ ಆ ಆಟಗಾರನ ಸ್ಥಾನದಲ್ಲಿ ಸರ್ಫರಾಜ್ ಅವರಿಗೆ ಅವಕಾಶ ಸಿಗುವ ಚಾನ್ಸ್​ ಇದೆ.

ಈ ಮೂಲಕ ಪಂದ್ಯಾವಳಿಯ ಮಧ್ಯದಲ್ಲಿ ಪ್ರವೇಶ ಪಡೆಯುವ ಅವಕಾಶವನ್ನು ಹೊಂದಿದ್ದಾರೆ.

ಐಪಿಎಲ್​ ತಂಡಗಳಿಗೆ ಶುರುವಾಯ್ತು ಹೊಸ ಟೆನ್ಷನ್