ಭಾನುವಾರದಂದು ಈ ಸಮಯದಲ್ಲಿ ಈ ದೇವರಿಗೆ ಪೂಜೆ ಮಾಡಿ!

ಹಿಂದೂ ಧರ್ಮದ ಪ್ರಕಾರ ಭಾನುವಾರ ಯಾವ ದೇವರನ್ನು ಪೂಜಿಸಿದ್ರೆ ಉತ್ತಮ ಎಂದು ಹಲವರಿಗೆ ತಿಳಿದಿಲ್ಲ

ಹೀಗಿರುವಾಗ ಭಾನುವಾರದಂದು ಯಾವ ದೇವರಿಗೆ ಪೂಜೆ ಮಾಡಬೇಕು ಅಂತ ತಿಳಿಯೋಣ ಬನ್ನಿ

ಭಾನುವಾರ ಸೂರ್ಯನನ್ನು ಪೂಜಿಸುವ ದಿನವಾಗಿದೆ. ಭಾನುವಾರದ ಶುಭ ದಿನದಂದು ಸೂರ್ಯದೇವನ ಪೂಜೆ ಮಾಡಬೇಕು. ಸೂರ್ಯನನ್ನು ಪೂಜಿಸುವುದರಿಂದ ನಮ್ಮೆಲ್ಲಾ ಆರೋಗ್ಯದ ಸಮಸ್ಯೆಗಳು ದೂರಾಗುತ್ತದೆ ಮತ್ತು ಚರ್ಮದ ಕಾಯಿಲೆಯು ನಿವಾರಣೆಯಾಗುತ್ತದೆಯಂತೆ ಹಾಗೆ ಸಕಾರಾತ್ಮಕತೆ ಹೆಚ್ಚಾಗುತ್ತದೆಯಂತೆ

ಭಾನುವಾರ ಸೂರ್ಯನನ್ನು ಪೂಜಿಸುವವರು ಸೂರ್ಯಾಸ್ತಕ್ಕೂ ಎದ್ದು ಮನೆಯನ್ನು ಶುದ್ಧಗೊಳಿಸಿ, ತಾವು ಶುದ್ಧರಾಗಿ ಸೂರ್ಯನಿಗೆ ಪ್ರಿಯವಾದ ಕೆಂಪು ಬಣ್ಣದ ಬಟ್ಟೆಯನ್ನು ಧರಿಸಿ ನಂತರ ಹಣೆಗೆ ಕುಂಕುಮ ಮಿಶ್ರಿತ ಶ್ರೀಗಂಧವನ್ನು ಹಚ್ಚಿಕೊಳ್ಳಬೇಕು

ಬಳಿಕ ಗಾಯತ್ರಿ ಮಂತ್ರವನ್ನು ಜಪಿಸುತ್ತಾ ಅರ್ಘ್ಯವನ್ನು ನೀಡಬೇಕು. ಹಾಗೂ ಕೆಂಪು ಬಣ್ಣದ ಹೂವುಗಳನ್ನು ಅರ್ಪಿಸಬೇಕು. ಉಪವಾಸವನ್ನು ಕೈಗೊಳ್ಳುವವರು ಸೂರ್ಯಾಸ್ತಕ್ಕಿಂತ ಮೊದಲು ಏನನ್ನಾದರೂ ಸೇವಿಸಬಹುದು

ಸೂರ್ಯನಿಗೆ ನೈವೇದ್ಯವಾಗಿ ಪಾಯಸ ಇಟ್ಟು ಪೂಜೆ ಮಾಡಿದರೆ ಅನಾರೋಗ್ಯದಿಂದ ಬಳಲುತ್ತಿರುವವರು ಚೇತರಿಸಿಕೊಳ್ಳುತ್ತಾರೆ ಎಂಬ ನಂಬಿಕೆ ಇದೆ

ಕೃಷ್ಣ ಜನ್ಮಾಷ್ಟಮಿಯಂದು ತಪ್ಪಿಯೂ ಈ ಕೆಲಸಗಳನ್ನು ಮಾಡ್ಬೇಡಿ!