ಹಚ್ಚ ಹಸಿರ ಪ್ರಕೃತಿಯ ನಡುವೆ ಕಂಗೊಳಿಸೋ ಕಪ್ಪು ಕಲ್ಲಿನ ಶಿಖರವೇ ಯಾಣ!

ಉತ್ತರ ಕನ್ನಡದ ಯಾಣ ನಿಜಕ್ಕೂ ಪ್ರಕೃತಿ ಮೂಡಿಸಿದ ಅದ್ಭುತ ಚಿತ್ತಾರ ಅನ್ನೋದರಲ್ಲಿ ಎರಡು ಮಾತಿಲ್ಲ.

ಮುಗಿಲೆತ್ತರಕ್ಕೆ ಚಾಚಿಕೊಂಡಿರೋ ಬಂಡೆ ಕಲ್ಲಿನ ಮಧ್ಯೆ ನಿಂತರಂತೂ ಹೊಸ ಲೋಕದ ಅನುಭವ.

ಉತ್ತರ ಕನ್ನಡದ ಯಾಣ ಅಂದ್ರೇನೆ ಹಾಗೆ ಪ್ರವಾಸಿಗರ ಪಾಲಿನ ಸ್ವರ್ಗದಂತೆ.

ಅದ್ರಲ್ಲೂ ಮಳೆಗಾಲ ಶುರುವಾಯಿತೆಂದರೆ ಸಾಕು ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಅಲ್ಲಿಗೆ ಭೇಟಿ ನೀಡುತ್ತಾರೆ.

ಹಚ್ಚ ಹಸಿರ ಪ್ರಕೃತಿ ಮಧ್ಯೆ, ಲ್ಯಾಂಡ್‌ ಮಾರ್ಕ್‌ ನಂತೆ ಕಾಣುವ ಇಲ್ಲಿನ ಶಿಖರಗಳು ನಿಜಕ್ಕೂ ಮಂತ್ರಮುಗ್ಧವನ್ನಾಗಿಸುತ್ತೆ.

ಕಪ್ಪು ಸುಣ್ಣದ ಕಲ್ಲಿನ ಮಣ್ಣು ಸುತ್ತಲೂ ಇರುವುದರಿಂದ ಈ ಜಾಗದಲ್ಲಿ ಹೇರಳವಾಗಿ ಕಪ್ಪುಮಣ್ಣಿದೆ.

ಯಾಣದ ಗೇಟ್ ನಿಂದ ಎರಡು ಕಿಲೋಮೀಟರ್ ನಡೆದು ಸಾಗಿದರೆ ಗಣೇಶನ ಗುಡಿಯಿದೆ.

ಹುತ್ತದಲ್ಲಿ ಚಂಡಿಕಾದೇವಿ ನೆಲೆಯಾಗಿದ್ದಾಳೆ. ಅಲ್ಲಿಂದ ಮುಂದೆ ಭೈರವೇಶ್ವರ ಶಿಖರ, ಗಂಗಾಚಂಡಿಕಾ ಭೈರವೇಶ್ವರ ದೇಗುಲವಿದೆ.

ಅಲ್ಲಿ ಗಣೇಶ, ಚಂಡಿಕಾ ಜೊತೆ ಸದಾಕಾಲ ಜಲಾಭಿಷೇಕವಾಗುವ ಸ್ವಯಂಭೂ ಭೈರವೇಶ್ವರ ಲಿಂಗವಿದೆ.