ಕೆಲವರಿಗೆ ಹಾಸಿಗೆ ಮೇಲೆ ಮಲಗಲು ಇಷ್ಟವಾಗುವುದಿಲ್ಲ, ಇನ್ನೂ ಕೆಲ ಮಂದಿಗೆ ನೆಲದ ಮೇಲೆ ಮಲಗಲು ಇಷ್ಟವಾಗುವುದಿಲ್ಲ

ಆದರೆ ವಾಸ್ತವವಾಗಿ ನೆಲದ ಮೇಲೆ ಮಲಗುವುದರಿಂದ ಅನೇಕ ಆರೋಗ್ಯ ಸಮಸ್ಯೆಗಳು ದೂರವಾಗುತ್ತದೆ ಎಂದು ತಜ್ಞರು ಹೇಳುತ್ತಾರೆ

 ಹಾಗಾದರೆ ನೆಲದ ಮೇಲೆ ಮಲಗುವುದರಿಂದ ಸಿಗುವ ಆರೋಗ್ಯ ಪ್ರಯೋಜನಗಳೇನು ಎಂದು ನೋಡೋಣ ಬನ್ನಿ

ಬೆನ್ನು ಮೂಳೆಗೆ ಬೆಂಬಲ: ಸಮಯಂ ವರದಿ ಪ್ರಕಾರ, ನೆಲದಂತಹ ಗಟ್ಟಿಯಾದ ಮೇಲ್ಮೈಗಳು ಬೆನ್ನಿಗೆ ಒತ್ತು ನೀಡುತ್ತದೆ

ಬಾವಿ ಏಕೆ ವೃತ್ತಾಕಾರದಲ್ಲಿ ಇರುತ್ತೆ? ಇದಕ್ಕೆ ಕಾರಣ ಇಲ್ಲಿದೆ ನೋಡಿ!

ಇವು ಬೆನ್ನುಮೂಳೆಯನ್ನು ನೇರವಾಗಿರಿಸಲು ಸಹಾಯ ಮಾಡುತ್ತದೆ ಹಾಗೂ ಬೆನ್ನು ನೋವನ್ನು ಕಡಿಮೆ ಮಾಡುತ್ತದೆ

ಸರಿಯಾದ ರಕ್ತ ಪರಿಚಲನೆ: ನೆಲದ ಮೇಲೆ ಮಲಗುವುದರಿಂದ ನೆಮ್ಮದಿಯಿಂದ ನಿದ್ರೆ ಬರುತ್ತದೆ. ಹಾಸಿಗೆಗಳು ಮತ್ತು ದಿಂಬುಗಳ ಮೇಲೆ ಮಲಗುವುದರಿಂದಲೂ ಯಾವುದೇ ಸಮಸ್ಯೆ ಇಲ್ಲ

ಆದರೆ ನೆಲದ ಮೇಲೆ ಮಲಗುವುದರಿಂದ ರಕ್ತ ಸಂಚಾರ ಉತ್ತಮವಾಗಿ ನಡೆಯುತ್ತದೆ. ಇದರಿಂದ ಚೆನ್ನಾಗಿ ನಿದ್ರೆ ಬರುತ್ತದೆ

ಬೆನ್ನು ನೋವು: ನೆಲದ ಮೇಲೆ ಮಲಗುವುದರಿಂದ ದೇಹದ ತೂಕ ಸಮಾನವಾಗಿರುತ್ತದೆ. ತೊಂದರೆ ಕಡಿಮೆ ಇರುತ್ತದೆ. ಅಸ್ವಸ್ಥತೆ ದೂರ ಹೋಗುತ್ತದೆ

ಒತ್ತಡವನ್ನು ಕಡಿಮೆ ಮಾಡುತ್ತದೆ. ಇದರೊಂದಿಗೆ ನೆಲದ ಮೇಲೆ ಮಲಗಿದರೆ ದೇಹದ ಉಷ್ಣತೆ ನಿಯಂತ್ರಣಕ್ಕೆ ಬರುತ್ತದೆ

ನಷ್ಟ ಕೂಡ: ನೆಲದ ಮೇಲೆ ಮಲಗುವುದರಿಂದ ಎಷ್ಟು ಪ್ರಯೋಜನವಿದೆಯೋ? ಅಷ್ಟೇ ಅನಾನುಕೂಲಗಳು ಕೂಡ ಇವೆ

ಮನೆಯಲ್ಲಿ ಸಾಕು ಪ್ರಾಣಿಗಳನ್ನು ಸಾಕಿದ್ದರೆ ಅವು ಓಡಾಡಿರುವ ಜಾಗದಲ್ಲಿ ಮಲಗುತ್ತೀರಿ ಇದರಿಂದ ರೋಗಾಣುಗಳು ನಿಮ್ಮ ದೇಹವನ್ನು ಪ್ರವೇಶಿಸುತ್ತದೆ

ಇದಲ್ಲದೇ ನೆಲದ ಮೇಲಿನ ಧೂಳು ಮತ್ತು ಬ್ಯಾಕ್ಟೀರಿಯಾಗಳು ಅಲರ್ಜಿಯನ್ನು ಉಂಟುಮಾಡುತ್ತವೆ

ಜಸ್ಟ್ ಇದೊಂದು ವಸ್ತು ಮನೆಯಲ್ಲಿದ್ರೆ ನಿಮಗೆ ಕೆಟ್ಟ ಕನಸು ಬರಲ್ವಂತೆ! ಏನದು?